ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾಗಿ ಅಬೂಸಾಲಿ ಹಾಜಿ ಆಯ್ಕೆ
Update: 2025-05-15 23:43 IST
ಮಂಗಳೂರು: ಕಿನ್ಯ ಕೇಂದ್ರ ಜುಮಾ ಮಸೀದಿಗೆ ನೂತನ ಅಧ್ಯಕ್ಷರಾಗಿ ಅಬೂಸಾಲಿ ಹಾಜಿ ಕುರಿಯಕ್ಕಾರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಸೀದಿಯ ಸಭಾಂಗಣದಲ್ಲಿ ಅಧ್ಯಕ್ಷರಾದ ಕೆ.ಸಿ.ಇಸ್ಮಾಯಿಲ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕಾದರ್ ಹಾಜಿ ಪುದಿಯರಕ್ಕಾರ್, ಕೋಶಾಧಿಕಾರಿಯಾಗಿ ಸಾದುಕುಂಞಿ ಹಾಜಿ ಸಾಗ್ ಬಾಗ್, ಉಪಾಧ್ಯಕ್ಷರಾಗಿ ಹಮೀದ್ ಕಿನ್ಯ, ಮೊಯ್ದೀನ್ ಹಾಜಿ, ಇಬ್ರಾಹಿಂ ಕೂಡಾರ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹಾಜಿ ಸಾಗ್, ಮುಹಮ್ಮದ್ ಹಾಜಿ ಚಾಕಟೆಪಡ್ಪು ಮತ್ತು 40 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.