×
Ad

ಬಂಟ್ವಾಳ| ಗಣೇಶೋತ್ಸವ: ಐಸ್‌ಕ್ರೀಮ್, ನೀರು ವಿತರಿಸಿದ ಮುಸ್ಲಿಂ ಐಕ್ಯ ವೇದಿಕೆ

Update: 2024-09-08 20:13 IST

ಬಂಟ್ವಾಳ :  ಅನಂತಾಡಿ ಕರಿಂಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಗಣೇಶನ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಮಾಣಿ ಸಮೀಪದ ಕೊಡಾಜೆಯ ಮುಸ್ಲಿಂ ಐಕ್ಯ ವೇದಿಕೆ ವತಿಯಿಂದ ಐಸ್ ಕ್ರೀಮ್ ಹಾಗೂ ನೀರು ವಿತರಿಸಲಾಯಿತು.

ರವಿವಾರ ‌ಸಂಜೆ ಕರಿಂಕದಿಂದ ಕೊಡಾಜೆಗೆ ಶೋಭಾಯಾತ್ರೆ ಆಗಮಿಸಿ ನೇರಳಕಟ್ಟೆ ತನಕ ಸಾಗಿ ಅಲ್ಲಿಂದ ಪುನಃ ಅನಂತಾಡಿ ತೆರಳಿತು. ಈ ಮಧ್ಯೆ ಕೊಡಾಜೆಗೆ ಆಗಮಿಸಿದ ವೇಳೆ ಭಕ್ತಾದಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೊಡಾಜೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಐಸ್ ಕ್ರೀಮ್ ಹಾಗೂ ಪಾನೀಯ ವಿತರಿಸಿದರು.

ಈ ಸಂದರ್ಭ ಚಲನಚಿತ್ರ ನಟರಾದ ಚೇತನ್ ರೈ ಮಾಣಿ, ಚಂದ್ರಹಾಸ ಶೆಟ್ಟಿ, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಸನತ್ ಕುಮಾರ್ ರೈ, ಬಾಲಕೃಷ್ಣ ಆಳ್ವ ಕೊಡಾಜೆ, ನಾರಾಯಣ ಸಾಲಿಯಾನ್, ಜಯಂತಿ ವಿ ಪೂಜಾರಿ, ಲತೀಫ್ ನೇರಳ ಕಟ್ಟೆ, ಇರ್ಷಾದ್ ಪಂತಡ್ಕ ಮಾತನಾಡಿ, ಶುಭ ಹಾರೈಸಿದರು.

ಪರಿಸರದ ಹಿಂದು - ಮುಸ್ಲಿಮರು, ಕೊಡಾಜೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News