×
Ad

ಬಿಸಿರೋಡ್: ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPIಯಿಂದ ತಿರಂಗಾ ರ್‍ಯಾಲಿ, ಸಾರ್ವಜನಿಕ ಸಭೆ

Update: 2025-08-13 17:35 IST

ಬಂಟ್ವಾಳ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಹಸಿವು ಮತ್ತು ಭಯ ಮುಕ್ತ ಸ್ವಾತಂತ್ರ್ಯಕ್ಕಾಗಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆಯು ಆಗಸ್ಟ್ 15ರಂದು ಬಿಸಿ ರೋಡ್‌ ನಲ್ಲಿ ನಡೆಯಲಿದೆ.

ಮಧ್ಯಾಹ್ನ 2.30ಕ್ಕೆ ಬಿಸಿ ರೋಡ್ ಸರ್ಕಲ್ ನಿಂದ ಆಕರ್ಷಕ ತಿರಂಗಾ ರ್‍ಯಾಲಿ ಆರಂಭವಾಗಲಿದೆ. ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯತೆಗಳೊಂದಿಗೆ ನಡೆಯುವ ರ್‍ಯಾಲಿಯು 3:30 ಕ್ಕೆ ಕೈಕಂಬ ಜಂಕ್ಷನ್ ತಲುಪಿ ಬಳಿಕ ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಕಾರ್ಯಕ್ರಮದಲ್ಲಿ SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಮುಖ್ಯ ಅತಿಥಿಯಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿರುವ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು, ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸ ಲಿದ್ದಾರೆ. ಭಯ ಮತ್ತು ಹಸಿವು ಮುಕ್ತ ಸ್ವಾತಂತ್ರ್ಯದ ಸಂಕಲ್ಪದೊಂದಿಗೆ ನಡೆ ಯುವ ಐತಿಹಾಸಿಕ ರ್‍ಯಾಲಿ ಮತ್ತು ಸಭಾ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ನಾಡಿನ ಎಲ್ಲಾ ನಾಗರಿಕರು ಪಕ್ಷಬೇದ ಮರೆತು ಭಾಗವಹಿಸಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News