×
Ad

ಪ್ರತಿಭಟನೆಯ ವೇಳೆ ತನ್ನ ಬಟ್ಟೆ ಎಳೆದು ಅವಮಾನಿಸಿದಲ್ಲದೆ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ: ಸೌಜನ್ಯ ತಾಯಿ ಕುಸುಮಾವತಿ ಆರೋಪ

Update: 2023-08-04 22:25 IST

ಬೆಳ್ತಂಗಡಿ: ಉಜಿರೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನ ಬಟ್ಟೆ ಎಳೆದು ಅವಮಾನಿಸಿರುವುದಲ್ಲದೆ ಮಗನ ಮೇಲೆ ಹಲ್ಲೆ ನಡೆಸಿರುವುದಾಗಿ ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಪ್ರತಿಭಟನೆಯ ಬಗ್ಗೆ ತಿಳಿದು ಅಲ್ಲಿಗೆ ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇತತರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ನಿಲ್ಲಿಸಿ, ಮೈಗೆ ಕೈ ಹಾಕಿ ತಾನು ಧರಿಸಿದ್ದ ಚೂಡಿದಾರದ ಶಾಲು ಎಳೆದು ಅಪಮಾನ ಮಾಡಿದ್ದಾರೆ. ತನ್ನ ಮಗ ಜಯರಾಮ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ 341, 354, 323 ಜೊತೆಗೆ 34IPC ಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News