ಸ್ಟ್ಯಾನ್‌ಫೋರ್ಡ್ ವಿವಿ ಹೊರತಂದ ಜಗತ್ತಿನ ಶ್ರೇಷ್ಠ ಸಂಶೋಧಕರ ಪಟ್ಟಿಯಲ್ಲಿ ಸತತ 2ನೇ ಬಾರಿಗೆ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್
Update: 2023-11-03 16:04 IST
ಮಂಗಳೂರು: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ಜಗತ್ತಿನ ಅಗ್ರ ಶೇ 2 ಸಂಶೋಧಕರ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಪ್ರೊ. ಆಸಿಫ್ ಅಫ್ಝಲ್ ಸ್ಥಾನ ಪಡೆದಿದ್ದಾರೆ. ಅವರು 2022 ಹಾಗೂ 1996-2022 ಅವಧಿಗೆ ಈ ಮಾನ್ಯತೆ ಪಡೆದಿದ್ದಾರೆ.
ಪ್ರಸ್ತುತ ರಜೆ ಮೇಲಿರುವ ಪ್ರೊ. ಅಫ್ಝಲ್ ಅವರು ಲಕ್ಸೆಂಬರ್ಗ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ನಡಸುತ್ತಿದ್ದಾರೆ.
ಅವರು ಈ ಹಿಂದೆ 2021 ವರ್ಷಕ್ಕೂ ಈ ಗೌರವ ಪಡೆದಿದ್ದಾರೆ.
ಡಾ ಅಸಿಫ್ ಅವರು ತಮ್ಮ ಪಿಎಚ್ ಡಿ ಪದವಿಯನ್ನು ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿನ ಪ್ರಾಂಶುಪಾಲರಾದ ಡಾ ರಮೀಸ್ ಎಂ ಕೆ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ನಡೆಸಿ ಪಡೆದಿದ್ದರು.