IAS ಪರೀಕ್ಷೆ ಆಕಾಂಕ್ಷಿಗಳಿಗೆ ನಿರಂತರ ಅಧ್ಯಯನ, ತಾಳ್ಮೆ ಮತ್ತು ದೇಶ ಸೇವೆಯ ತುಡಿತ ಅತೀ ಅಗತ್ಯ: ಅಬ್ದುಲ್ ಅಹದ್, IPS
ಅಬ್ದುಲ್ ಅಹದ್, IPS
ಮಂಗಳೂರು: ನಗರದ "ಏಸ್ - ಐ.ಎ.ಎಸ್" ಅಕಾಡೆಮಿಯ ಐ.ಎ.ಎಸ್ ಫೌಂಡೇಶನ್ ಬ್ಯಾಚ್ 2025 ಯನ್ನು ಉದ್ಘಾಟಿಸಿ, ಮಾತಾನಾಡಿದ ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಅಹದ್ ಅವರು UPSC ಆಕಾಂಕ್ಷಿಗಳಲ್ಲಿ ನಿರಂತರ ಅಧ್ಯಯನಶೀಲತೆ, ತಾಳ್ಮೆ ಮತ್ತು ದೇಶ ಸೇವೆಯ ತುಡಿತವಿದ್ದಲ್ಲಿ ಮಾತ್ರ ಈ ಪರೀಕ್ಷೆಯಲ್ಲಿ ಯಶಸ್ಸುಗಳಿಸಬಹುದು ಎಂದು ಹೇಳಿದರು.
UPSC ಅಕಾಂಕ್ಷಿಗಳೊಂದಿಗೆ ನಡೆಸಿದ ಸಂವಾದದಲ್ಲಿ UPSC ಪರೀಕ್ಷೆ ಕುರಿತು ವಿದ್ಯಾರ್ಥಿಗಳ ಸಂಶಯಗಳನ್ನು ನಿವಾರಿಸಿ, ಅವರಲ್ಲಿ ಹೊಸ ಹುರುಪನ್ನು ತುಂಬಿದರು. ಆ ಬಳಿಕ ಮುಹಮ್ಮದ್ ಇಶ್ರತ್ ಎ.ಇ. ಅವರು ವಿದ್ಯಾರ್ಥಿಗಳಿಗೆ UPSC ಪರೀಕ್ಷೆ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಗಾರವನ್ನು ನಡೆಸಿಕೊಟ್ಟರು.
"ಏಸ್- ಐ.ಎ.ಎಸ್" ಅಕಾಡೆಮಿಯ ನಿರ್ದೇಶಕ ನಝೀರ್ ಅಹ್ಮದ್ ಅವರು ಐ.ಎ.ಎಸ್ ಫೌಂಡೇಶನ್ ಕೋರ್ಸ್ ಅನ್ನು SSLC, PUC ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದ್ದು, ಪ್ರತಿ ರವಿವಾರ ತರಗತಿಗಳು ನಡೆಯಲ್ಲಿದ್ದು IAS ಅಥವಾ ಇತರ ಯಾವುದೇ ಸರಕಾರಿ ಹುದ್ದೆ ಅಥವಾ ನೌಕರಿಯ ಆಕಾಂಕ್ಷಿಗಳಿಗೆ ಈ ಕೋರ್ಸ್ ತುಂಬಾ ಉಪಯುಕ್ತವಾಗಿದ್ದು ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಿಸಲು ವಿನಂತಿಸಿದರು.
ಕಾರ್ಯಕ್ರಮದಲ್ಲಿ "ಏಸ್ ಫೌಂಡೇಶನ್" ಟ್ರಸ್ಟಿಗಳಾದ ಇಂತಿಯಾಝ್ ಖತೀಬ್, ಬಿ.ಎಸ್. ಮುಹಮ್ಮದ್ ಬಷೀರ್, ಅಲ್ತಾಫ್ ಖತೀಬ್, ಸಯ್ಯದ್ ಸಿರಾಜ್ ಮತ್ತು ಶಾಹುಲ್ ಹಮೀದ್ ತಂಙಳ್ ಅವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.