×
Ad

ಅಂತರ್‌ ಕಾಲೇಜು ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಸಹ್ಯಾದ್ರಿ ಕಾಲೇಜಿನ ಆರ್ಯಗೆ ಚಿನ್ನದ ಪದಕ

Update: 2023-09-05 19:44 IST

ಮಂಗಳೂರು,ಸೆ.5: ಬೆಂಗಳೂರಿನ ವೆಮೆನಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ 23 ನೇ ವಿಟಿಯು ಅಂತರ್ ಕಾಲೇಜು ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಡ್ಯಾರ್ನ್‌ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಎಂಬಿಎ ಎರನೇ ಸೆಮಿಸ್ಟರ್ ವಿದ್ಯಾರ್ಥಿನಿ ಆರ್ಯ ಬಿ ಎಸ್ 71 ಕೆಜಿ ವಿಭಾಗದಲ್ಲಿ ಚಿನ್ನದ ಪಡೆದಿದ್ದಾರೆ.

81 ಕೆಜಿ ವಿಭಾಗದಲ್ಲಿ ಇಂಜಿನಿಯರಿಂಗ್ (ಇ ಆ್ಯಂಡ್‌ಸಿ) ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ದಿಯಾ ಎಚ್. ಶೆಟ್ಟಿ ಬೆಳ್ಳಿ ಜಯಿಸಿದರು.

ಇವರು ಗರ್ಲ್ಸ್ ವೇಟ್ ಲಿಫ್ಟಿಂಗ್ ಟೀಮ್ ರನ್ನರ್ಸ್ ಆಪ್‌ನಲ್ಲಿ ಭಾಗವಹಿಸಿದ್ದಾರೆ. ಚಿನ್ನದ ಪದಕ ವಿಜೇತೆ ಆರ್ಯ ಬಿ ಎಸ್ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಟಿಯು ಅನ್ನು ಪ್ರತಿನಿಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News