ಕರ್ನಾಟಕ ಮುಸ್ಲಿಂ ಜಮಾಅತ್ ಪುನರ್‌ರಚನೆ: ನೂತನ ಪದಾಧಿಕಾರಿಗಳ ಆಯ್ಕೆ
ಶಬೀರ್ ಅಹ್ಮದ್ ರಝ್ವಿ, ಸೈಯದ್ ಇಸ್ಮಾಯಿಲ್ ಮದನಿ, ಡಾ. ಫಾಝಿಲ್ ರಝ್ವಿ, ಮುಹಮ್ಮದ್ ಶಾಹಿದ್ ರಝ್ವಿ
ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಸಮಾವೇಶವು ಶಿವಮೊಗ್ಗ ಮದಾರಿ ಪಾಳ್ಯ, ಹೆವೆನ್ ಪ್ಯಾಲೇಸ್, ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ರಾಜ್ಯದ ಹದಿನಾರು ಜಿಲ್ಲೆಗಳ ಮುಸ್ಲಿಂ ಜಮಾಅತ್ ಪ್ರತಿನಿಧಿಗಳು ಪಾಲ್ಗೊಂಡರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಸೈಯದ್ ಇಸ್ಮಾಯಿಲ್ ಮದನಿ ಅಲ್ ಹಾದಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ರಾಜ್ಯ ಕೋಶಾಧಿಕಾರಿ ಹಾಜಿ ಇಕ್ಬಾಲ್ ಹಬೀಬ್ ಸೇಠ್ ಉದ್ಘಾಟನೆ ಮಾಡಿದರು.
ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಎನ್. ಕೆ. ಎಂ ಶಾಫಿ ಸಅದಿ ತರಬೇತಿ ನೀಡಿದರು. ಡಾ ಎಮ್ಮೆಸ್ಸೆಂ ಝೖನೀ ಕಾಮಿಲ್ 'ಮೀಲಾದೇ ರಸೂಲ್-1500' ವಾರ್ಷಿಕ ಅಭಿಯಾನದ ಯೋಜನೆ ವಿವರಿಸಿದರು.
ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ (ಸಲಹೆಗಾರರು)
ಸೈಯದ್ ಇಸ್ಮಾಯಿಲ್ ಮದನಿ ಅಲ್ ಹಾದಿ ಉಜಿರೆ (ಗೌರವಾಧ್ಯಕ್ಷರು)
ಮೌಲಾನಾ ಶಬೀರ್ ಅಹ್ಮದ್ ರಝ್ವಿ ಬೆಂಗಳೂರು (ಅಧ್ಯಕ್ಷರು)
ಮೌಲಾನಾ ಎನ್. ಕೆ. ಎಂ ಶಾಫಿ ಸಅದಿ (ಡೆಪ್ಯೂಟಿ ಅಧ್ಯಕ್ಷರು)
ಅಲ್ ಹಾಜ್ ಮುಹಮ್ಮದ್ ಶಾಹಿದ್ ರಝ್ವಿ ಚಿಕ್ಕಮಗಳೂರು (ಪ್ರಧಾನ ಕಾರ್ಯದರ್ಶಿ)
ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ (ಡೆಪ್ಯೂಟಿ ಕಾರ್ಯದರ್ಶಿ)
ಹಾಜಿ ಇಖ್ಬಾಲ್ ಹಬೀಬ್ ಸೇಠ್ ಶಿವಮೊಗ್ಗ (ಕೋಶಾಧಿಕಾರಿ)
ಉಪಾಧ್ಯಕ್ಷರಾಗಿ:-
ಸೈಯದ್ ಶಿಹಾಬುದ್ದೀನ್ ಸಖಾಫಿ ಅಲ್ ಐದರೂಸ್ ಕೊಡಗು, ಮೌಲಾನಾ ನಾಸಿರ್ ಹುಸೈನ್ ರಝ್ವಿ ಹಾಸನ, ಮುಫ್ತಿ ಮನ್ಝೂರ್ ಅಹ್ಮದ್ ಬೆಳಗಾವಿ, ಸೈಯದ್ ಖಾಸಿಂ ಹಾಶಿಮಿ ಬಿಜಾಪುರ, ಸೈಯದ್ ಮುಹಮ್ಮದ್ ಅಲ್ ಹುಸೈನಿ ಅಲಿ ಬಾಬಾ ಗುಲ್ಬರ್ಗ, ಹಾಜಿ ಎಸ್ ಮುಹಮ್ಮದ್ ಸಾಗರ, ಎನ್.ಎ. ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಮೌಲಾನಾ ಆರಿಫ್ ರಝಾ ತುಮಕೂರು, ಬಿ ಎಸ್ ಎಫ್ ರಫೀಖ್ ಕುಂದಾಪುರ, ತಾಜುದ್ದೀನ್ ಬಾಬಾ ಹುಬ್ಬಳ್ಳಿ, ನಿಯಾಝ್ ಇಮಾಮ್ ಹೊಸಪೇಟೆ, ಹಾಜಿ ನವಾಝ್ ಅಹ್ಮದ್ ಬಳ್ಳಾರಿ, ಡಾ. ಉಮರ್ ಅಭಿಮಾನ್ ಬೆಂಗಳೂರು, ಡಾ. ಶೇಕ್ ಬಾವ ಹಾಜಿ ಮಂಗಳೂರು, ಹಾಜಿ ಯೂಸುಫ್ ಉಪ್ಪಳ್ಳಿ.
ಕಾರ್ಯದರ್ಶಿಗಳಾಗಿ:- ಮೌಲಾನಾ ಜಾವೀದ್ ಮಿಸ್ಬಾಹಿ ಗುಲ್ಬರ್ಗ, ಅಮಾನುಲ್ಲಾಹ್ ದಾವಣಗೆರೆ, ಉಮರ್ ಹಾಶಿಮಿ ಬೀದರ್, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್, ಅಬ್ದುಲ್ ನಾಸಿರ್ ಇಂಪಾಲ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಂಗಳೂರು, ಮುಹಮ್ಮದ್ ನಈಮ್ ಕಟಪಾಡಿ, ಅಡ್ವೋಕೇಟ್ ಝುಲ್ಫಿಕರ್ ಚಿತ್ರದುರ್ಗ, ನವಾಝ್ ಶೇಖ್ ಅಂಕೋಲಾ, ಅಬ್ದುಲ್ಲತೀಫ್ ಸುಂಟಿಕೊಪ್ಪ, ಯಾಕೂಬ್ ಯೂಸುಫ್ ಹೊಸನಗರ, ಅಶ್ರಫ್ ಕಿನಾರ, ಅಡ್ವೋಕೇಟ್ ಫಯಾಝ್ ಮೈಸೂರು, ಕೆ ಎಸ್ ಅಬೂಬಕರ್ ಸಅದಿ ಮಜೂರು, ಅಬ್ದುಲ್ ರಹ್ಮಾನ್ ತುಮಕೂರು ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸದಸ್ಯರಾಗಿ: ಸೈಯದ್ ಸೈಫುಲ್ಲಾಹ್ ದಾವಣಗೆರೆ, ಸೈಯದ್ ಹಬೀಬ್ ಸರ್ಮಸ್ತ್ ಕಲಬುರ್ಗಿ, ಸುಬ್ಹಾನ್ ಅಹ್ಮದ್ ಹೊನ್ನಾಳ, ಸೈಯದ್ ಅಝ್ಮತ್ ರಾಮನಗರ, ಮುಹಮ್ಮದ್ ರಫಿ ಬಳ್ಳಾರಿ, ಮುಹ್ಸಿನ್ ರಿಫಾಈ ಹಾವೇರಿ, ಅಬ್ದುಲ್ ರಹ್ಮಾನ್ ನ್ಯಾಷನಲ್, ಜೆ.ಎಸ್.ಮುಹಮ್ಮದ್ ಅಲಿ ಸಕಲೇಶಪುರ, ಎಂ ಬಿ ಅಬ್ದುಲ್ ಹಮೀದ್ ಮಡಿಕೇರಿ, ಅಬ್ದುಲ್ ಹಫೀಲ್ ಕೊಳಕೇರಿ, ಮುಹಮ್ಮದ್ ಹಾಜಿ ಕುಂಜಿಲ, ಕೆ ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ಹಾಫಿಲ್ ಅದಂ ಹಝ್ರತ್ ಚಿತ್ರದುರ್ಗ, ಬಿ.ಎ. ಇಬ್ರಾಹಿಂ ಸಖಾಫಿ ದಾವಣಗೆರೆ, ಅಬ್ದುಲ್ ಜಬ್ಬಾರ್ ಸಅದಿ ಶಿವಮೊಗ್ಗ, ಹನೀಫ್ ಬೆಜ್ಜವಳ್ಳಿ, ಎಸ್. ವೈ. ಎಸ್. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಕೆ.ಎಂ. ಮೊಂಟುಗೋಳಿ.
ಸಮಾರಂಭದಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಬಷೀರ್ ಸಅದಿ ಬೆಂಗಳೂರು, ಉಪಾಧ್ಯಕ್ಷರಾದ ಸೈಯದ್ ಮಾರ್ನಳ್ಳಿ ತಂಙಳ್, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಕೆ ಎಂ ಮೊಂಟುಗೋಳಿ, ಕೋಶಾಧಿಕಾರಿ ಮನ್ಸೂರ್ ಕೋಟಗದ್ದೆ, ಕಾರ್ಯದರ್ಶಿಗಳಾದ ಹಸೈನಾರ್ ಆನೆಮಹಲ್, ಅಬ್ದುಲ್ ಹಮೀದ್ ಮದದಿ ನಗರ, ರಾಜ್ಯ ನಾಯಕರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಡಗು, ಶಿವಮೊಗ್ಗ ಜಿಲ್ಲಾಧ್ಯಕ್ಷ ಸೈಯದ್ ಸಿದ್ದೀಖ್ ತಂಙಳ್ ಮುರ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ, ಬಳ್ಳಾರಿ ಖಾಝಿ ಮುಫ್ತಿ ಮುಹಮ್ಮಿದ್ ಸಿದ್ದಿಖಿ, ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಮುಸ್ತಫಾ ನಈಮಿ ಹಾವೇರಿ ಭಾಷಣ ಮಾಡಿದರು. ಹಾಫಿಲ್ ಸಈದ್ ಅಹ್ಮದ್ ಖುರ್ಆನ್ ಪಾರಾಯಣ ಮಾಡಿದರು.
ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಕಿನಾರ ಸ್ವಾಗತಿಸಿ, ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ತುಮಕೂರು ವಂದಿಸಿದರು.