×
Ad

ಕೊಣಾಜೆ | ಸ್ಕೂಟರ್- ಟೆಂಪೊ ಮಧ್ಯೆ ಅಪಘಾತ: ಸ್ಕೂಟರ್ ಸವಾರ ಮೃತ್ಯು

Update: 2025-01-17 11:27 IST

ಕೊಣಾಜೆ: ದ್ವಿಚಕ್ರ ವಾಹನ ಮತ್ತು ಏಸ್ ಟೆಂಪೊ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಯುವಕ ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಇಂದು ಬೆಳಗ್ಗೆ 10:30ರ ಸುಮಾರಿಗೆ ಸಂಭವಿಸಿದೆ.

ಮೃತರನ್ನು ಕೊಣಾಜೆ ಗ್ರಾಮದ ನಡುಪದವು ಕಾಟುಕೋಡಿ ನಿವಾಸಿ ಮೊಯ್ದೀನ್ ಕುಂಞಿ ಬಾವು ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ರಝ್ವಿ(22) ಎಂದು ಗುರುತಿಸಲಾಗಿದೆ.

ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಏಸ್ ಟೆಂಪೊ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಭಾಗಶಃ ಟೆಂಪೊದೊಳಗೆ ನುಗ್ಗಿದ್ದು, ನಜ್ಜುಗುಜ್ಜಾಗಿದೆ. ಈ ವೇಳೆ ಟೆಂಪೋದ ಮೇಲೆ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಟೆಂಪೋ ಚಾಲಕ ಕೂಡಾ ಗಾಯಗೊಂಡಿದ್ದಾರೆ.

ಅಬೂಬಕರ್ ಸಿದ್ದೀಕ್ ಕಾಸರಗೋಡಿನಲ್ಲಿ ಅರಬಿಕ್ ಶರೀಅತ್ ಕಾಲೇಜಿನಲ್ಲಿ ಕಲಿಯುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News