×
Ad

ಕೃಷ್ಣಾಪುರ ಡೆವಲಪ್ ಮೆಂಟ್ ಕಮಿಟಿ ಮಹಾಸಭೆ

Update: 2024-01-16 14:51 IST

ಸುರತ್ಕಲ್:‌  ಕೃಷ್ಣಾಪುರ ಡೆವಲಪ್ ಮೆಂಟ್ ಕಮಿಟಿಯ ಮಹಾಸಭೆಯು ಇತ್ತೀಚೆಗೆ ಮಿಸ್ಬಾ ಕಾಲೇಜ್ ಸಭಾಂಗಣದಲ್ಲಿ ಸಂಸ್ಥೆಯ ಕಾರ್ಯಧಕ್ಷ  ಎಂ. ಎಸ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

 ಅನ್ಸಾರ್ ಅವರು ಖಿರಾಅತ್ ಪಠಿಸಿದರು.  ಪ್ರಧಾನ ಕಾರ್ಯದರ್ಶಿ ಜನಾಬ್ ಹನೀಫ್ NMPT ಅವರು ಸಭಿಕರನ್ನು ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ  ಇಸ್ಮಾಯಿಲ್ ಎನ್‌ ಜಿಸಿ (ಎನ್‌ಆರ್‌ಐ) ಸಭೆಯನ್ನು ಉದ್ಘಾಟಿಸಿ ಸಂಸ್ಥೆಯ ಧ್ಯೇಯೋದ್ದೇಶ ಹಾಗೂ ಹಮ್ಮಿಕೊಂಡ ಎಲ್ಲಾ ಚಟುವಟಿಕೆಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಕಾಯ೯ದರ್ಶಿ ಮನ್ಸೂರ್ ಆಲಿ ರಯ್ಯಾನ್ ವರದಿ ವಾಚಿಸಿದರು.  ಪ್ರಧಾನಕಾರ್ಯದರ್ಶಿ ಹನೀಫ್ ಎನ್‌ ಎಂಪಿಟಿ ಅವರು ಲೆಕ್ಕ ಪತ್ರ ಮಂಡಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಜನಾಬ್ ಬಿಎಂ ಮುಮ್ತಾಝ್ ಆಲಿ ಅವರು ಮಾತನಾಡಿ KDC ಯ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಕೆಲಸ ಕಾಯ೯ಗಳನ್ನು ಮಾಡಲು ಹಾಗೂ ಇದರ ಉನ್ನತಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಕಾರ್ಯಧ್ಯಕ್ಷರಾದ ಎಂ. ಎಸ್ ಶರೀಫ್ ಅವರು ಮಾತನಾಡುತ್ತಾ, KDC ಯು ಬೆಳೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. KDCಯ ವತಿಯಿಂದ  ಕೃಷ್ಣಾಪುರ ಪಾರ್ಕಿಗೆ ಒದಗಿಸಿದ ಮೂಲ ಸೌಕರ್ಯ, ಶಾಲಾ ಕಾಲೇಜುಗಳ ಉನ್ನತಿಗೆ ಮಾಡಿದ ಕೆಲಸ ಕಾರ್ಯಗಳನ್ನು ಹಾಗೂ ರಸ್ತೆಗಳ ದುರಸ್ತಿ ಮಾಡಲು ಶ್ರಮಿಸಿದ ಬಗ್ಗೆ ತಿಳಿಸಿದರು.

2023 - 24 ರ ಅವಧಿಗೆ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು: ಹಾಜಿ ಬಿ.ಎಂ ಮುಮ್ತಾಝ್ ಅಲಿ

ಅಧ್ಯಕ್ಷರು: ಇಸ್ಮಾಯಿಲ್ ಎನ್‌ ಜಿಸಿ  (ಎನ್‌ಆರ್‌ಐ)

ಕಾರ್ಯಧ್ಯಕ್ಷರು: ಎಂ.ಎಸ್ ಶರೀಫ್

ಪ್ರಧಾನ ಕಾರ್ಯದರ್ಶಿ: ಎಂ.ಎ ಹನೀಫ್ 

ಉಪಾಧ್ಯಕ್ಷರು ಹಾಜಿ: ಪಿ.ಎಂ ಉಸ್ಮಾನ್

ಗೌರವ ಕಾರ್ಯದರ್ಶಿ: ಮುಹಮ್ಮದ್ ಅಲಿ ಕೆ.ಸಿ (NRI) 

ಕಾರ್ಯದರ್ಶಿಗಳು: ಮನ್ಸೂರ್ ಆಲಿ ರಯ್ಯಾನ್, ಅಬ್ದುರ್ರಹ್ಮಾನ್‌ ಪ್ರಿ೦ಟೆಕ್ 

ಕೋಶಾಧಿಕಾರಿ: ಟಿ. ಅಬ್ದುಲ್ ಅಝೀಝ್

ಲೆಕ್ಕ ಪರಿಶೋಧಕ: ಬಿ.ಎ ಇಕ್ಬಾಲ್

ಕೊನೆಯಲ್ಲಿ ಕಾರ್ಯದರ್ಶಿ ಮನ್ಸೂರ್ ಅಲಿ ಧನ್ಯವಾದಗೈದರು . ಗೌರವ ಕಾಯದರ್ಶಿ ಮುಹಮ್ಮದ್ ಅಲಿ ಕೆ.ಸಿ (NRI) ಕಾರ್ಯಕ್ರಮ ನಿರೂಪಿಸಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News