ಮ್ಯಾಕ್ ಗ್ರೂಪ್ | ವಿಶೇಷ ಜೀವನಾನುಭವಕ್ಕಾಗಿ ಮಂಗಳೂರಿನ ಹೃದಯಭಾಗದಲ್ಲಿ ‘ಮ್ಯಾಕ್ ಫಳ್ನೀರ್ ಪ್ಯಾಟಿಯೊ’ ಪ್ರೀಮಿಯಂ ವಸತಿ ಸಮುಚ್ಚಯ
ಮಂಗಳೂರು, ಮೇ 19: ಮಂಗಳೂರಿನ ಹೃದಯಭಾಗವಾಗಿರುವ ಫಳ್ನೀರ್ ನಲ್ಲಿ ಮ್ಯಾಕ್ ಗ್ರೂಪ್ ನಿರ್ಮಿಸಿರುವ ‘ಮ್ಯಾಕ್ ಫಳ್ನೀರ್ ಪ್ಯಾಟಿಯೊ’ ವಸತಿ ಸಮುಚ್ಚಯವು ವಿಶೇಷವಾದ ಜೀವನ ಅನುಭವವನ್ನು ಬಯಸುವವರಿಗೆ ಒಂದು ಅಪೂರ್ವ ಅವಕಾಶವನ್ನು ಒದಗಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
24 ಅಪಾರ್ಟ್ ಮೆಂಟ್ ಗಳನ್ನು ಒಳಗೊಂಡಿರುವ ಈ ಪ್ರೀಮಿಯಂ ವಸತಿ ಸಮುಚ್ಚಯವು ಅತ್ಯಾಧುನಿಕ ಸೌಕರ್ಯ ಮತ್ತು ಸೊಬಗಿನೊಂದಿಗೆ ಗಮನಸೆಳೆಯತ್ತಿದೆ. ಉತ್ತಮ ವಾಸ್ತುಶಿಲ್ಪಮತ್ತು ವಿನ್ಯಾಸದ ಆಧುನಿಕ ಸೌಕರ್ಯಗಳೊಂದಿಗೆ ನೆಮ್ಮದಿಯ ಜೀವನ ಶೈಲಿಯನ್ನು ಬಯಸುವ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ‘ಮ್ಯಾಕ್ ಫಳ್ನೀರ್ ಪ್ಯಾಟಿಯೊ’ ಅತ್ಯುತ್ತಮ ಆಯ್ಕೆಯಾಗಿದೆ.
ರೆರಾ(RERA)ಅನುಮೋದನೆ ಪಡೆದಿರುವ ಮ್ಯಾಕ್ ಫಳ್ನೀರ್ ಪ್ಯಾಟಿಯೊ ವಸತಿ ಸಮುಚ್ಚಯವು 1,262 ಚದರ ಅಡಿಯ 2 BHK ಮತ್ತು 1,709 ಚದರ ಅಡಿಯಿಂದ 1,827 ಚದರ ಅಡಿವರೆಗಿನ 3 BHK ಫ್ಲ್ಯಾಟ್ ಗಳನ್ನು ಒಳಗೊಂಡಿದೆ.
ಪ್ರಶಾಂತ ಸ್ಥಳದಲ್ಲಿರುವ ಫಳ್ನೀರ್ ಪ್ಯಾಟಿಯೊದಲ್ಲಿರುವ ಎಲ್ಲ ಮನೆಗಳೂ ಸಾಕಷ್ಟು ನೈಸರ್ಗಿಕ ಗಾಳಿ, ಬೆಳಕನ್ನು ಪಡೆಯಲಿದೆ. ಕ್ಲಬ್ಹೌಸ್, ವಿಶಾಲವಾದ ಕಾರಿಡಾರ್ ಗಳು, ಗ್ರೀನ್ ವಾಲ್ ಮತ್ತು ವಿಶಾಲವಾದ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಮ್ಯಾಕ್ ಫಳ್ನೀರ್ ಪ್ಯಾಟಿಯೊ ಇರುವ ಫಳ್ನೀರ್ ಪ್ರದೇಶ ಅಗತ್ಯದ ಸೇವೆಗಳು, ಶಾಲೆಗಳು, ಆಸ್ಪತ್ರೆಗಳು, ಶಾಪಿಂಗ್ ಕೇಂದ್ರಗಳು ಮತ್ತು ಸಾರಿಗೆ ಸಂಪರ್ಕಗಳಿಗೆ ಹೆಸರುವಾಸಿಯಾಗಿದೆ. ಉತ್ತಮ ಸೌಲಭ್ಯಗಳೊಂದಿಗೆ ಈ ಅಪಾರ್ಟ್ಮೆಂಟ್ ಗಳು ಜೀವನಶೈಲಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ.
ಹೆಚ್ಚಿನ ಮಾಹಿತಿಗೆ ಮ್ಯಾಕ್ ಗ್ರೂಪ್, 4ನೇ ಮಹಡಿ, ಮಾರ್ಕ್ ಮಾಲ್, ಕಂಕನಾಡಿ, ಮಂಗಳೂರು-575002, ದೂರವಾಣಿ: +91 70902 00027 / +91 96866 79695, ಸ್ಥಿರ ದೂರವಾಣಿ: +91 824 2432427 ಅಥವಾ ಇ ಮೇಲ್: ಅನ್ನು enquiry@mak.in, ವೆಬ್ ಸೈಟ್: http://www.mak.in ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ವೆಶಿಷ್ಟ್ಯಗಳು
♦ ಹವಾ ನಿಯಂತ್ರಿತ ಪ್ರವೇಶ ಲಾಬಿ
♦ ಕಟ್ಟಡಕ್ಕೆ ಪ್ರವೇಶ ನಿಯಂತ್ರಿತ ಮುಖ್ಯದ್ವಾರ
♦ಪ್ರತೀ ಅಪಾರ್ಟ್ ಮೆಂಟ್ ಗೂ ಭದ್ರತಾ ವೀಡಿಯೊ ಡೋರ್ ಫೋನ್ ಸೌಲಭ್ಯ
♦ಹವಾನಿಯಂತ್ರಿತ ಮಲ್ಟಿ ಜಿಮ್
♦ಟೇಬಲ್ ಟೆನಿಸ್, ಪೂಲ್ ಟೇಬಲ್, ಕೇರಂ, ಚೆಸ್ ಬೋರ್ಡ್ ಮತ್ತು ಕಾರ್ಡ್ ಮತ್ತಿತರ ಒಳಾಂಗಣ ಆಟಗಳಿಗೆ ಸ್ಥಳಾವಕಾಶ
♦2 ಸ್ವಯಂಚಾಲಿತ ಲಿಫ್ಟ್
♦ಮುಖ್ಯದ್ವಾರದ ಬಳಿ ಭದ್ರತಾ ಕ್ಯಾಬಿನ್
♦ಮಕ್ಕಳ ಆಟವಾಡಲು ಸ್ಥಳ
♦ಜನರೇಟರ್ನೊಂದಿಗೆ ಶೇ 100ರಷ್ಟು ಪವರ್ ಬ್ಯಾಕಪ್
♦ಸಿಸಿಟಿವಿ ಕ್ಯಾಮರಾ ಕಣ್ಗಾವಲಿನೊಂದಿಗೆ 24x7 ಭದ್ರತೆ
♦ಸಂದರ್ಶಕರ ಪಾರ್ಕಿಂಗ್ ಗ್ರೀನ್ ವಾಲ್
♦ನೆಲ ಮಹಡಿಯಲ್ಲಿ ಸರ್ವಿಸ್ ರೂಂ ಮತ್ತು ಸಾಮಾನ್ಯ ಶೌಚಾಲಯ
♦ದಿನದ 24 ಗಂಟೆಗಳ ಕಾಲ ನಗರ ಪಾಲಿಕೆಯ ನೀರಿನ ಸಂಪರ್ಕದ ಜೊತೆಗೆ ಬೋರ್ ವೆಲ್/ಬಾವಿಯ ನೀರು ಸರಬರಾಜು ವ್ಯವಸ್ಥೆ
♦ಸೋಲಾರ್ ಸಿಸ್ಟಮ್ (ಮಾನದಂಡಗಳಿಗೆ ಅನುಗುಣವಾಗಿ)
ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ