×
Ad

ಮಂಗಳೂರು: ಎ.ಆರ್.ಎಂ ಮೋಟರ್ಸ್ ನ ನೂತನ ಶೋರೂಂ ಶುಭಾರಂಭ

Update: 2023-10-07 11:27 IST

ಮಂಗಳೂರು : ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಇಂಡಿಯಾ ಅಧಿಕೃತ ಡೀಲರ್ ಎ.ಆರ್.ಎಂ ಮೋಟರ್ಸ್ ಇವರ ಸರ್ಟಿಫೈಡ್ ಪ್ರಿ- ಓನ್ಡ್ ಕಾರಿನ ನೂತನ ಶೋರೂಂ ಮಂಗಳೂರಿನ ಕೂಳೂರಿನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

ಎ‌.ಆರ್‌.ಎಂ ಮೋಟರ್ಸ್‌ನ ಎಂ.ಡಿ ಆರೂರು ಗಣೇಶ್ ರಾವ್‌ರವರು ನೂತನ ಶೋರೂಂ ಅನ್ನು ಉದ್ಘಾಟಿಸಿದರು.

ಸಂಸ್ಥೆಯ ಡೈರೆಕ್ಟರ್ಸ್ ಆರೂರು ವರುಣ್ ರಾವ್ ಹಾಗೂ ಆರೂರು ವಿಕ್ರಮ್ ರಾವ್ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎ‌.ಆರ್‌.ಎಂ ಮೋಟರ್ಸ್‌ನ ವೈಸ್ ಪ್ರೆಸಿಡೆಂಟ್ ವಿವನ್ ಸೋನ್ಸ್, ಜನರಲ್ ಮ್ಯಾನೇಜರ್ (ಸೇಲ್ಸ್) ನಿತಿನ್ ಕೃಷ್ಣ, ಜನರಲ್ ಮ್ಯಾನೇಜರ್ (ಸರ್ವೀಸ್) ಶಶಿಕುಮಾರ್ ಉಡುಪಿ, ಎಜಿಎಂ ಕನಕ ಕುಮಾರ್ ಹಾಗೂ ಬ್ರಾಂಚ್ ಮ್ಯಾನೇಜರ್ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ಕಿಯಾ ಹೊಸ ಕಾರಿನ ಮಾಹಿತಿ ಹಾಗೂ ಟೆಸ್ಟ್ ಡ್ರೈವ್ ಜೊತೆಗೆ ಎಲ್ಲಾ ಬ್ರಾಂಡ್ ಕಾರಿನ ಮಾರಾಟ ಮತ್ತು ಖರೀದಿಗೆ ಗ್ರಾಹಕರಿಗೆ ಎ.ಆರ್.ಎಂ ಮೋಟರ್ಸ್‌ನ ಕದ್ರಿ, ಕಣ್ಣೂರು ಮತ್ತು ಕೂಳೂರು ಶೋರೂಂ‌ನಲ್ಲಿ ಅವಕಾಶವಿದೆ.

ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಕಿಯಾ ನೂತನ ಕಾರು ಹಾಗೂ ಸರ್ಟಿಫೈಡ್ ಕಾರಿನ ಮಾರಾಟ ಮತ್ತು ಖರೀದಿಗೆ ವಿಶೇಷ ಆಕರ್ಷಕ ಕೊಡುಗೆಗಳಿವೆ ಮತ್ತು ಹಣಕಾಸಿನ ಸೌಲಭ್ಯವೂ ಲಭ್ಯವಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News