×
Ad

ಮಂಗಳೂರು: ಹಿಯರಿಂಗ್ ಆ್ಯಂಡ್ ಸ್ಪೀಚ್ ಕ್ಲಿನಿಕ್ ‘ಹಿಯರ್ ಸೇ’ ಶುಭಾರಂಭ

Update: 2023-09-16 20:26 IST

ಮಂಗಳೂರು, ಸೆ.16: ಹಿಯರಿಂಗ್ ಆ್ಯಂಡ್ ಸ್ಪೀಚ್ ಕ್ಲಿನಿಕ್ -‘ಹಿಯರ್ ಸೇ’ ಹಂಪನಕಟ್ಟೆಯ ಬಲ್ಮಠ ರಸ್ತೆಯ ಕ್ರಿಸ್ಟಲ್ ಆರ್ಕ್ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡಿತು.

ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಡಾ.ಯು.ಟಿ ಇಫ್ತಿಕಾರ್ ಅಲಿ ಉದ್ಘಾಟಿಸಿ‌, ಶುಭ ಹಾರೈಸಿದರು.

‘ಹಿಯರ್ ಸೇ’ ಕ್ಲಿನಿಕ್‌ನಲ್ಲಿ ಉಚಿತ ಶ್ರವಣ ಪರೀಕ್ಷೆ, ಹಿಯರಿಂಗ್ ಏಡ್ ಟ್ರಯಲ್, ಶ್ರವಣ ಸಹಾಯ ಸೇವೆಗಳು, ಭಾಷಣ ಮತ್ತು ಭಾಷಾ ಮೌಲ್ಯಮಾಪನ ಮತ್ತು ಚಿಕಿತ್ಸೆ, ಬ್ಯಾಟರಿಗಳು ಮತ್ತು ಪರಿಕರಗಳು ಲಭ್ಯ ಎಂದು ಸಂಸ್ಥೆಯ ಮಾಲಕರು, ಚೀಫ್ ಆಡಿಯೋಲಜಿಸ್ಟ್ ಆ್ಯಂಡ್ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಹಸೀಬ್ ಅನ್ಫಾಲ್ ತಿಳಿಸಿದ್ದಾರೆ.

ನೂತನ ‘ಹಿಯರ್ ಸೇ’ ಕ್ಲಿನಿಕ್‌ನಲ್ಲಿ ಸೆ.18 ರಿಂದ 30ರವರೆಗೆ ಬೆಳಗ್ಗೆ 10:30 ರಿಂದ ಸಂಜೆ 7:30ರವರೆಗೆ ಉಚಿತ ಶ್ರವಣ ಪರೀಕ್ಷೆ ಇಲ್ಲಿ ಲಭ್ಯವಿರುತ್ತದೆ. ಸಮಸ್ಯೆ ಇರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಡಾ. ಯು.ಟಿ.ಇಫ್ತಿಕಾರ್ ಅಲಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

Udupifresh.com ಮಾಲಕ ಶೇಖ್ ಮುಹಮ್ಮದ್ ಶಫಿ, ಉದ್ಯಮಿ ಅಬ್ದುಲ್ ನಾಸಿರ್ ಮಲ್ಪೆ, ಸಾದಿಖ್ ಹಸನ್‌ ಉಪಸ್ಥಿತರಿದ್ದರು.


































 


 


 


 


 


 


 


 


 


 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News