×
Ad

ಮಂಗಳೂರು: ಮಹೇಶ್ ಮೋಟಾರ್ಸ್‌ ಮಾಲಕ ಪ್ರಕಾಶ್ ಶೇಖ ಆತ್ಮಹತ್ಯೆ

Update: 2023-10-01 19:59 IST

ಪ್ರಕಾಶ್ ಶೇಖ

ಮಂಗಳೂರು, ಅ.1: ಮಹೇಶ್ ಮೋಟಾರ್ಸ್‌ ಇದರ ಮಾಲಕ ಜಯರಾಮ ಶೇಖ ಅವರ ಪುತ್ರ ಪ್ರಕಾಶ್ ಶೇಖ (42) ಅವರು ರವಿವಾರ ಕದ್ರಿಯ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಪ್ರಕಾಶ್ ಅವರ ಅಕಾಲಿಕ ನಿಧನಕ್ಕೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಬಸ್ ಮಾಲಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ,  ಸಮಾಜ ಸೇವಕರು ಮತ್ತು ದಾನಿಗಳಾಗಿ ಗುರುತಿಸಿಕೊಂಡಿದ್ದ ಪ್ರಕಾಶ್ ಶೇಖ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಇವರ ಅಗಲಿಕೆ ಬಸ್ ಮಾಲಕರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್  ಪರ್ತಿಪ್ಪಾಡಿ ಮತ್ತು ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News