×
Ad

ಮಂಗಳೂರು: ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

Update: 2023-12-11 18:47 IST

ಮಂಗಳೂರು : ನಗರದ ಹೊರವಲಯದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ಹಾಸ್ಟಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 8ರಂದು ನಡೆದಿರುವುದು ವರದಿಯಾಗಿದೆ.

ವಳಚ್ಚಿಲ್‌ನ ಶ್ರೀನಿವಾಸ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸಚಿನ್ ಸಾಜು (19) ಹಾಸ್ಟೆಲ್ ಕೊಠಡಿಯಲ್ಲಿ ಬೆಡ್‌ಶೀಟ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಕೇರಳದ ಆಲಪ್ಪಿಯ ನಿವಾಸಿಯಾಗಿರುವ ಸಚಿನ್ ಸಾಜು ನವೆಂಬರ್ 30ರಂದು ಕಾಲೇಜಿಗೆ ಪ್ರವೇಶ ಪಡೆದಿದ್ದರು ಎನ್ನಲಾಗಿದೆ. ಖಿನ್ನತೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಚಿನ್ ಸಾಜು ಕೆಲವು ದಿನಗಳಿಂದ ಕ್ಲಾಸ್‌ಗೆ ಹಾಜರಾಗಿರಲಿಲ್ಲ. ತನ್ನ ಕೊಠಡಿಯಲ್ಲಿ ಸಹಪಾಠಿಗಳು ಇಲ್ಲದೆ ಸಮಯದಲ್ಲಿ ಈ ಕೃತ್ಯ ಎಸೆಗಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News