×
Ad

ಮಂಗಳೂರು | 'ಬಸ್ಸಿನ ಫೂಟ್‌ಬೋರ್ಡ್‌ನಲ್ಲಿ ನಿಲ್ಲುವಂತಿಲ್ಲ...': ನೌಕರರಿಗೆ ಜಾಗೃತಿ ಮೂಡಿಸಿದ ಖಾಸಗಿ ಬಸ್ ಮಾಲಕರು

Update: 2023-09-02 13:40 IST

ಮಂಗಳೂರು: ಖಾಸಗಿ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಕಂಡಕ್ಟರ್ ಮೃತಪಟ್ಟ ಮತ್ತು ಇತರ ಖಾಸಗಿ ಬಸ್ ವಿಚಾರವಾಗಿ ಇಂದು ಬೆಳಗ್ಗೆ ನಗರದ ನಂತೂರ್ ವೃತ್ತದ ಬಳಿ ಬಸ್ಸು ಮಾಲಕರು ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಜಾಗೃತಿ ಮೂಡಿಸಿದರು.

ಈ ಕುರಿತಂತೆ ಮಾಹಿತಿ ಇರುವ ಪ್ರತಿಗಳನ್ನು ಬಸ್ಸು ನಿರ್ವಾಹಕರಿಗೆ ನೀಡಿ ಮನವರಿಕೆ ಮಾಡಲಾಯಿತು.

ನಿರ್ವಾಹಕ ಸಹಿತ ಯಾರೂ ಬಸ್ಸಿನ ಫೂಟ್‌ಬೋರ್ಡ್‌ನಲ್ಲಿ ನಿಲ್ಲುವಂತಿಲ್ಲ, ಪ್ರತಿಯೊಬ್ಬರಿಗೂ ಟಿಕೆಟ್ ನೀಡಬೇಕು, ಚಲೋ ಕಾರ್ಡ್‌ಗಳನ್ನು ತಿರಸ್ಕರಿಸುವಂತಿಲ್ಲ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಕರ್ಕಶ ಹಾರ್ನ್ ಬಳಸುವಂತಿಲ್ಲ ಮೊದಲಾದ ಸೂಚನೆಗಳನ್ನು ಬಸ್ಸು ಚಾಲಕ ಮತ್ತು ನಿರ್ವಾಹಕರಿಗೆ ನೀಡಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News