×
Ad

ಮಂಗಳೂರು: ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ Trailer ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Update: 2026-02-06 19:26 IST

ಮುಲ್ಕಿ: ರಸ್ತೆ ಬದಿ ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ Trailer ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಪಾವಂಜೆ ದೆವಸ್ಥಾನದ ಮುಂಭಾಗ ಶುಕ್ರವಾರ ಸಂಜೆ ನಡೆಸಿದೆ.

ಗಾಯಗೊಂಡವರನ್ನು‌ ಶಿಕ್ಷಕಿ ಕುಸುಮಾ ಮತ್ತು ಅವರ ಮಗಳು ಸುಮಲತಾ (14) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅವರು ಪಾವಂಜೆಯಲ್ಲಿ ನಿಂತು ಬಸ್ ಕಾಯುತ್ತಿದ್ದ ವೇಳೆ ಮಂಗಳೂರು- ಉಡುಪಿ ಕಡೆ ಸಂಚರಿಸುತ್ತಿದ Trailer ಢಿಕ್ಕಿ ಹೊಡೆದಿದೆ. ಘಟನೆಯಿಂದ ಕುಸುಮಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸುಮಲತಾ ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನಾ‌ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, Trailer ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News