×
Ad

ಮಂಗಳೂರು: ಕೇರಳ ಮೂಲದ ಯುವಕ-ಯುವತಿ ಜೊತೆ ಗೂಂಡಾಗಿರಿ: ಮೂವರ ಬಂಧನ

Update: 2023-12-23 14:51 IST

Photo: freepik

ಮಂಗಳೂರು, ಡಿ.23: ನಗರದ ಮಿಲಾಗ್ರಿಸ್ ಬಳಿ ಗುರುವಾರ ಮಧ್ಯಾಹ್ನ ಕೇರಳ ಮೂಲದ ಯುವಕ ಮತ್ತು ಯುವತಿಯ ಜೊತೆ ಅನುಚಿತವಾಗಿ ವರ್ತಿಸಿ ಗೂಂಡಾಗಿರಿ ನಡೆಸಿದ ಮೂವರನ್ನು ಬಂದರ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಸಂದೇಶ್ (28), ಪ್ರಶಾಂತ್ (31), ರೋಣಿತ್ (31) ಎಂದು ಗುರುತಿಸಲಾಗಿದೆ. ಗುರುವಾರ ಕೇರಳ ಮೂಲದ ಯುವಕ- ಯುವತಿಯು ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮೂವರು ಯುವಕರು ತಡೆದು ನಿಲ್ಲಿಸಿ ಗುರುತು ಪರಿಚಯ ಕೇಳಿ ಗೂಂಡಾಗಿರಿ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News