×
Ad

ಮಂಜನಾಡಿ | ಅಲ್ ಮದೀನಾ ಪಿಯು, ಪದವಿ ಹೆಣ್ಮಕ್ಕಳ ಶರಫಿಯ್ಯಾ ಆರ್ಟ್ ಫೆಸ್ಟ್ ಸಮಾಪ್ತಿ

Update: 2025-12-03 18:02 IST

ಮಂಜನಾಡಿ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಮದೀನಾ ಹೆಣ್ಮಕ್ಕಳ ಪಿಯುಸಿ ಹಾಗೂ ಶರಫ್ ಹೆಣ್ಮಕ್ಕಳ ಪದವಿ ಕಾಲೇಜಿ‌ನ ವಾರ್ಷಿಕೋತ್ಸವ 'ಶರಫಿಯ್ಯಾ ಆರ್ಟ್ ಫಿಯೆಸ್ಟಾ-2k25' ಡಿ.1ರಿಂದ 3 ರ ತನಕ ನಡೆಯಿತು.‌

ಫಿಹ್ರಿಯ್ಯಾ, ಖೈಸಿಯ್ಯಾ ಹಾಗೂ ಮಿಸ್ರಿಯ್ಯಾ ಎಂಬ ಮೂರು ತಂಡಗಳ ನಡುವೆ 44 ವಿವಿಧ ಸ್ಪರ್ದೆಗಳು ನಡೆಯಿತು.

ಫಾತಿಮಾ ಸನಾ ಫರಂಗಿಪೇಟೆ ಹಾಗೂ ಖದೀಜಾ‌ ನಿಹಾ ತೋಕೆ ನಾಯಕತ್ವದ ಖೈಸಿಯ್ಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಯಿಷತ್ ರಿಳ್ವಾನ ಮಂಜನಾಡಿ ಮತ್ತು ನಫೀಸಾ ಸನಾ ಕಲ್ಮಿಂಜ ರ ನಾಯಕತ್ವದ ಮಿಸ್ರಿಯ್ಯಾ ತಂಡ ದ್ವೀತಿಯ ಹಾಗೂ ಖದೀಜಾ ನುಸೈಬಾ ಉರುಮಣೆ ಹಾಗೂ ಫಾತಿಮತ್ ಮುನೀಝಾ ತೌಡುಗೋಳಿಯವರ ನಾಯಕತ್ವದ ಫಿಹ್ರಿಯ್ಯಾ ತಂಡ ತೃತೀಯ ಸ್ಥಾನ‌ ಗಳಿಸಿತು.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಖದೀಜಾ ನಿಹಾ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರೆ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆಮಿನತ್ ಹನೂನ ಮೋರ್ಲ ಎರಡನೇ ಚಾಂಪಿಯನ್ ಸ್ಥಾನಗಳಿಸಿದರು.

ಕಬಕ ಕೆಜಿಎನ್ ಶೀ ಕ್ಯಾಂಪಸ್ ಷರೀಅತ್ ವಿಭಾಗದ ನಿಕಟಪೂರ್ವ ಮುಖ್ಯಸ್ಥೆ ಸಫೀದಾ ಅಲ್ ಮಾಹಿರಾ ನಚ್ಚಬೆಟ್ಟು, ಮಿತ್ತೂರು ನೌರತುಲ್ ಮದೀನಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮದ್ರಸ ಅಧ್ಯಾಪಿಕೆ ಶಾಹಿದಾ ಅಲ್ ಫಾಝಿಲಾ ಪಾಟ್ರಕೋಡಿ, ಹಾಗೂ ಫಾತಿಮತುನ್ನಿಸಾ ಅಲ್ ಫಾಝಿಲಾ ಪಾಟ್ರಕೋಡಿ ವಿವಿಧ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಅಲ್ ಮದೀನಾ ಇಸ್ಲಾಮಿಕ್ ನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಖಾಫಿ‌ ಉದ್ಘಾಟಿಸಿದರು. ಎಕ್ಸಿಕ್ಯೂಟಿವ್ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಮ್ಜದಿ, ಅಕಾಡಮಿಕ್ ಡೈರೆಕ್ಟರ್ ಅಬೂಸ್ವಾಲಿಹ್ ಅಝ್ಹರಿ, ಹಿರಿಯ ಸಿಬ್ಬಂದಿ ಅಬ್ದುರ್ರಝ್ಝಾಖ್ ನಾವೂರು, ಅಲ್ ಮದೀನಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯ ಮನ್ಸೂರು ಹಿಮಮಿ, ಪದವಿ ಕಾಲೇಜು ಪ್ರಾಂಶುಪಾಲ ಶಮ್ಸೀರ್, ಅಧ್ಯಾಪಕ ಹಾಫಿಳ್ ಶಮ್ಸುದ್ದೀನ್ ನ‌ಈಮಿ, ಆಫೀಸ್ ಚೀಫ್ ಅಬ್ದುಲ್ ಖಾದರ್ ಝುಹ್ರಿ ಅತಿಥಿಗಳಾಗಿ ಭಾಗವಹಿಸಿದರು.

ಅಲ್ ಮದೀನಾ ಹೆಣ್ಮಕ್ಕಳ ಪಿಯು ಕಾಲೇಜು ಪ್ರಾಂಶುಪಾಲೆ ಸಂಗೀತಾ, ಉಪನ್ಯಾಸಕಿಯರಾದ ಚೇತನಾ, ಸುಷ್ಮಾ, ದಿವ್ಯಾ, ಕುಮಾರಿ ಅಕ್ಷತಾ, ದಿಲ್ಶಾನಾ ಬಾನು ಹಾಗೂ ಇಸ್ಮತ್ ಉಳ್ಳಾಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News