×
Ad

ಫೆ.5 ರಂದು ದ.ಕ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಾಮೂಹಿಕ ಧರಣಿ

Update: 2025-02-03 13:45 IST

ಮಂಗಳೂರು: ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಬೇಕು, ಬ್ರಹ್ಮರ ಕೂಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು, ಹೊಸ ಟೇಲ್ ಗೇಟ್ ಗಳನ್ನು ಅಳವಡಿಸುವ ಸಂದರ್ಭ ಅಂತರದ ನಿಯಮಗಳನ್ನು ಪಾಲಿಸಬೇಕು, ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಫೆಬ್ರವರಿ 05 ಬುಧವಾರ ದಂದು ಬೆಳಿಗ್ಗೆ 10:00 ಗಂಟೆಗೆ ನಂತೂರು ಜಂಕ್ಷನ್ ಸಮೀಪ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಸಾಮೂಹಿಕ ಧರಣಿ ಹಮ್ಮಿಕೊಂಡಿದೆ.

ಮೇಲ್ದರ್ಜೆಗೆ ಏರುತ್ತಿರುವ ಬಿ ಸಿ ರೋಡ್ - ಗುಂಡ್ಯ, ಪೂಂಜಾಲಕಟ್ಟೆ - ಚಾರ್ಮಾಡಿ, ನಂತೂರು - ಮೂಡಬಿದ್ರೆ - ಕಾರ್ಕಳ ಹೆದ್ದಾರಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು, ಪೂರ್ತಿ ಹದಗೆಟ್ಟಿರುವ ಸುರತ್ಕಲ್ - ನಂತೂರು ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು, ಸ್ಥಗಿತಗೊಂಡಿರುವ ನಂತೂರು ಮೇಲ್ಸೇತುವೆ, ಕೂಳೂರು ನೂತನ ಸೇತುವೆ ಕಾಮಗಾರಿಗಳನ್ನು ಆದ್ಯತೆಯಲ್ಲಿ ನಡೆಸಿ ಕಾಲಮಿತಿಯ ಒಳಗಡೆ ಪೂರ್ಣಗೊಳಿಸಬೇಕು ಮುಂತಾದ ಅತ್ಯಂತ ಪ್ರಮುಖ ಬೇಡಿಕೆಗಳ ಮೇಲೆ ಸಾಮೂಹಿಕ ಧರಣಿ ನಡೆಯುತ್ತಿದ್ದು, ಸಮಸ್ಯೆಗಳು ಬಗೆ ಹರಿಯುವವರಗೆ ಹಲವು ಹಂತಗಳಲ್ಲಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಜಿಲ್ಲೆಯ ಮಾಜಿ ಸಚಿವರು, ಶಾಸಕರುಗಳು, ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರುಗಳು ಧರಣಿಯಲ್ಲಿ ಭಾಗಿಗಳಾಗಲಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News