×
Ad

ಮಾಸ್ಟರ್ ಶೆಫ್ ವಿಜೇತ ಮುಹಮ್ಮದ್ ಆಶಿಕ್ ಮಂಗಳೂರಿಗೆ ಆಗಮನ; ಅಭಿಮಾನಿಗಳಿಂದ ಭವ್ಯ ಸ್ವಾಗತ

Update: 2023-12-10 15:06 IST

ಮಂಗಳೂರು: ಪ್ರತಿಷ್ಠಿತ ಅಡುಗೆ ಸ್ಪರ್ಧೆ ಮಾಸ್ಟರ್ ಶೆಫ್‌ ನಲ್ಲಿ ವಿಜೇತರಾಗಿರುವ ಮುಹಮ್ಮದ್ ಆಶಿಕ್ ಇಂದು ಮಧ್ಯಾಹ್ನ ಮಂಗಳೂರಿಗೆ ಆಗಮಿಸಿದ್ದಾರೆ.

ಮುಂಬೈನಿಂದ ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಬಂದಿಳಿದ ಮುಹಮ್ಮದ್ ಆಶಿಕ್ ಅವರನ್ನು ಫ್ಯಾನ್ಸ್ ಕುಡ್ಲ ಗೆಳೆಯರ ಬಳಗ, ಅಭಿಮಾನಿಗಳು, ಕುಟುಂಬದ ಸದಸ್ಯರು, ಹಿತೈಷಿಗಳು ಹೃತ್ಪೂರ್ವಕವಾಗಿ ಬರಮಾಡಿಕೊಂಡರು.

ಅಂತಾರಾಷ್ಟ್ರೀಯ ಖ್ಯಾತಿಯ ಸೂಪರ್ ಸ್ಟಾರ್ ಶೆಫ್‌ಗಳು ತೀರ್ಪುಗಾರರಾಗಿರುವ ಸೋನಿ ಲೈವ್ ನಲ್ಲಿ ಪ್ರಸಾರವಾದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಪ್ರಪ್ರಥಮ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಮುಹಮ್ಮದ್ ಆಶಿಕ್ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ‌

ಚಂಡೆ ವಾದ್ಯಗಳ ಸಹಿತ ಭರ್ಜರಿ ಸ್ವಾಗತ ನೀಡಿದ್ದು, ಇಂದು ಸಂಜೆ 4 ಗಂಟೆಗೆ ನಗರದ ನೆಕ್ಸಸ್ ಫಿಝ ಮಾಲ್‌ ನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News