×
Ad

ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಸತ್ತು ಚುನಾವಣೆ

Update: 2023-08-08 13:53 IST

ಬಂಟ್ವಾಳ : ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಚುನಾವಣೆ ಪ್ರಕ್ರಿಯೆ ಯ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದವಿ ಪೂರ್ವ ವಿಭಾಗದ ಫಾತಿಮಾ ಅನ್ಸಬಾ , ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸನುಫರ್ ಝುನೋಬಿಯ ಜಯಗಳಿಸಿದರು.

ವಿರೋಧಪಕ್ಷದ ನಾಯಕಿಯರಾಗಿ ದ್ವಿತೀಯ ಕಲಾ ವಿಭಾಗದ ರೀಹಾ ಶಾಝಿನ್ ಮತ್ತು ಎಂ.ಸಂಬ್ರಿನಾ ಚುನಾಯಿತರಾದರು.

ಚುನಾವಣೆ ಅಧಿಕಾರಿಯಾಗಿ ಎಂಜಲಿನ್ ಸುನಿತಾ ಪಿರೇರಾ, ಇತರ ಅಧಿಕಾರಿಗಳಾಗಿ ಉಪನ್ಯಾಸಕರಾದ ಸೌಮ್ಯ, ಗಾಯತ್ರಿ, ವಿಜಯ, ನಿಶಾ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News