×
Ad

ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ವಿಚಾರ; ದ.ಕ.ಜಿಲ್ಲಾಧಿಕಾರಿಗೆ ಮುಸ್ಲಿಂ ಲೀಗ್ ಮನವಿ

Update: 2023-11-05 15:58 IST

ಮಂಗಳೂರು, ನ.5: ಟಿಪ್ಪು ಸುಲ್ತಾನ್ ಜನ್ಮದಿನವನ್ನು ನ.10ರಂದು ವಿಜೃಂಭಣೆಯಿಂದ ಆಚರಿಸಬೇಕು ಮತ್ತು ಶಾಲಾ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನರ ಚರಿತ್ರೆಯನ್ನು ಅಳವಡಿಸುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದ.ಕ.ಜಿಲ್ಲಾ ನಿಯೋಗವು ದ.ಕ. ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಟಿಪ್ಪು ಸುಲ್ತಾನ್ ತನ್ನ ಅಲ್ಪಕಾಲದ ಜೀವಿತಾವಧಿಯಲ್ಲಿ ಅನೇಕ ಯೋಜನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. ಅವುಗಳನ್ನು ಯುವಪೀಳಿಗೆಗೆ ತಿಳಿಸಿಕೊಡಬೇಕಿದೆ. ಅದಕ್ಕಾಗಿ ಜಯಂತಿ ಆಚರಿಸಬೇಕು ಮತ್ತು ಪಠ್ಯದಲ್ಲಿ ಟಿಪ್ಪು ವಿಚಾರ ಅಳವಡಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ಈ ಸಂದರ್ಭ ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಹರೇಕಳ, ಎಚ್. ಮುಹಮ್ಮದ್ ಇಸ್ಮಾಯಿಲ್, ಕೆ.ಸಿ.ಖಾದರ್, ಎಚ್‌.ಕೆ ಕುಂಞಿ, ಅಝರ್ ಕಲಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News