ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ
ಅಡ್ಯನಡ್ಕ, ನ.25: ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭ ಶುಕ್ರವಾರ ಜನತಾ ಪದವಿಪೂರ್ವ ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಹಾಗೂ ಆರ್ಥಿಕ ತಜ್ಞ ಸಿ.ಎ ಅಬ್ದುಲ್ಲಾ ಮಾದುಮೂಲೆ ಅವರು ಮಾತನಾಡಿ‘ ವಿದ್ಯಾರ್ಥಿಗಳಿಗೆ ಗುರಿ, ಛಲ, ದೃಢ ಮನಸ್ಸು ಇರಬೇಕು. ಪುಸ್ತಕಗಳ ಓದು ಮತ್ತು ಜ್ಞಾನವೃದ್ಧಿಯ ಕಡೆಗೆ ಗಮನ ನೀಡ ಬೇಕು’ ಎಂದು ಹೇಳಿದರು. ಇನ್ನೊರ್ವ ಮುಖ್ಯ ಅತಿಥಿ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಮಾತನಾಡಿ ಜನತಾ ವಿದ್ಯಾಸಂಸ್ಥೆ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ದಿನಗಳನ್ನು ನೆನಪಿಸಿಕೊಂಡು, ಸಂಸ್ಥಾಪಕರನ್ನು ಸ್ಮರಿಸಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿ‘ ಆಕಾಶದಷ್ಟು ಎತ್ತರದ ಗುರಿಯಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ’ ಎಂದು ಕಿವಿಮಾತು ನುಡಿದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಪ್ರಸ್ತಾವನೆಗೈದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಸಿ.ಎ. ಅಬ್ದುಲ್ಲಾ ಮಾದುಮೂಲೆ ಹಾಗೂ ಇಬ್ರಾಹಿಂ ಅಡ್ಕಸ್ಥಳ ಅವರನ್ನು ಸನ್ಮಾನಿಸಲಾಯಿತು.
ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಹಾಗೂ ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಅತಿಥಿಗಳನ್ನು ಪರಿಚಯಿಸಿದರು.ಶಿಕ್ಷಕರಾದ ಶಿವಕುಮಾರ್ ಸಾಯ ಹಾಗೂ ಗಣೇಶ ಕೆ. ಆರ್. ಸನ್ಮಾನಪತ್ರ ವಾಚಿಸಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ, ಜನತಾ ಪದವಿಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದೇವಾನಂದ ಶೆಣೈ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚೆನ್ನಕೇಶವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದತ್ತಿನಿಧಿಯ ವರದಿಯನ್ನು ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ವಾಚಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಉಳಯ ಅವರು ಹಳೆ ವಿದ್ಯಾರ್ಥಿ ಸಂಘದ ವರದಿಯನ್ನು ವಾಚಿಸಿದರು. ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿ. ವಾರಣಾಶಿ ಸುಬ್ರಾಯ ಭಟ್ ಹಾಗೂ ದಿ. ಸಾಯ ಕೃಷ್ಣ ಭಟ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ದತ್ತಿನಿಧಿ ವಿತರಣೆ, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಶಿಕ್ಷಕರಾದ ರಾಜಗೋಪಾಲ ಜೋಶಿ ಎಸ್, ಸುಗುಣ ರೈ, ಗೀತಾಕುಮಾರಿ, ಮಮತಾ, ಪವಿತ್ರ, ಭವ್ಯ ಆರ್ ರೈ ಹಾಗೂ ಸದಾನಂದ ರೈ ಅವರು ಬಹುಮಾನ ವಿಜೇತರ ಹಾಗೂ ಪುರಸ್ಕೃತರ ಹೆಸರು ವಾಚಿಸಿದರು.
ಪೂರ್ವಾಹ್ನ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಸಂಸ್ಥೆಯ ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿಯ ಸದಸ್ಯ ಶಂಕರ್ ಸಾರಡ್ಕ, ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ವಿ. ಕೆ, ನಿವೃತ್ತ ಶಿಕ್ಷಕ ಎ. ಸದಾಶಿವ ಹೊಳ್ಳ, ಗ್ರಾ.ಪಂ ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು , ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಸಚ್ಚಿದಾನಂದ ಶಾಸ್ತ್ರಿ, ಅಮೈ ಜನಾರ್ದನ ಭಟ್, ಕೇಶವ ಭಟ್ ಚವರ್ಕಾಡು ಉಪಸ್ಥಿತರಿದ್ದರು.
ದಿ. ಪಾರ್ವತಿ ಅಮ್ಮನವರ ಮತ್ತು ಮಗ ದಿ.ನಾರಾಯಣ ಜೋಶಿ ಚವರ್ಕಾಡು ಅವರ ಸ್ಮರಣಾರ್ಥ ಸರೋಜಾ ನಾರಾಯಣ ಜೋಶಿ ಅವರಿಂದ ಸಿಹಿತಿಂಡಿ ವಿತರಣೆ ನಡೆಯಿತು. ಜನತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಾಯಕಿ ಕು. ನಮಿತಾ ಪಿ.ಕೆ. ಹಾಗೂ ಕು. ವಿಶಾಖಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ. ವಂದಿಸಿದರು. ಅಪರಾಹ್ನ ಹಿರಿಯ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.