×
Ad

ಹಜ್ ಯಾತ್ರೆ: ಅರ್ಜಿ ಸಲ್ಲಿಕೆ ಆರಂಭ

Update: 2023-12-04 20:34 IST

ಮಂಗಳೂರು : ಮುಂದಿನ (2024) ವರ್ಷದಲ್ಲಿ ಹಜ್‌ಯಾತ್ರೆಗೆ ಹೋಗಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಡಿ.4ರಿಂದ ಆರಂಭವಾಗಿದೆ.

ಭಾರತ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ 2023ರ ಹಜ್ ನೀತಿಯಂತೆ ಹಜ್‌ಯಾತ್ರೆ ನಡೆಯಲಿದೆ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಭಾರತೀಯ ಹಜ್ ಸಮಿತಿಯ ವೆಬ್‌ಸೈಟ್ hajcommittee.gov.in ಅಥವಾ ಮೊಬೈಲ್ ಆ್ಯಪ್ “HAJ SUVIDHA”ದಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಮೊದಲು ನಿಯಮಗಳನ್ನು ಜಾಗರೂಕತೆಯಿಂದ ಓದಿ ಬಳಿಕ ಅರ್ಜಿಗಳನ್ನು ಭರ್ತಿ ಮಾಡಬೇಕು. ಅರ್ಜಿದಾರರು 2025ರ ಜನವರಿ 31ರವರೆಗೆ ಅವಧಿ ಇರುವ ಪಾಸ್‌ಪೋರ್ಟ್ ಹೊಂದಿರಬೇಕು.

ಅರ್ಜಿ ಸಲ್ಲಿಕೆಗೆ ಡಿಸೆಂಬರ್ 20 ಕೊನೆಯ ದಿನವಾಗಿದೆ ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News