×
Ad

ಗ್ರಾಮವಿದ್ಯಾ ಮಂಗಳೂರು ಕೇಂದ್ರದಿಂದ ಪರಿವರ್ತನಾ ಪಟ್ಟಣಗಳ ಕುರಿತು ಸಂವಾದ

Update: 2023-12-11 19:47 IST

ಮಂಗಳೂರು: ಸುಸ್ಥಿರ ಜೀವನ ಪದ್ಧತಿಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಗ್ರಾಮವಿದ್ಯಾ ಮಂಗಳೂರು ಕೇಂದ್ರವು ಪೀಕ್ ಆಯಿಲ್ ಇಂಡಿಯಾ ಮತ್ತು ಇಕೊಲೊಜೈಸ್ ಸಂಸ್ಥೆಗಳ ಸಂಸ್ಥಾಪಕ ಸದಸ್ಯ ಟಿ.ಜಯೇಂದ್ರ ಅವರಿಂದ ‘ಸುಸ್ಥಿರತೆಯ ಕಡೆಗೆ ಪರಿವರ್ತನಾ ಪಟ್ಟಣಗಳ ಚಲನೆ’ ಕುರಿತು ಸಂವಾದ ಕಾರ್ಯಕ್ರಮವು ಇತ್ತೀಚೆಗೆ ನಗರದ ಕೋಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.

ರಷ್ಯಾದ ಸೈಬೀರಿಯಾದಲ್ಲಿನ ಪರಿಸರ-ಗ್ರಾಮದಲ್ಲಿ ಬೇಟೆಗಾರ-ಸಂಗ್ರಾಹಕ ಜೀವನಶೈಲಿಯನ್ನು ಅಳವಡಿಸಿಕೊಂಡ ನಿವಾಸಿಗಳು ಮತ್ತು ಭಾರತದಲ್ಲಿನ ವಿವಿಧ ಪರಿವರ್ತನಾ ಪಟ್ಟಣಗಳ ಬಗ್ಗೆ ಗಮನ ಸೆಳೇದ ಜಯೇಂದ್ರ ಸುಸ್ಥಿರ ಜೀವನಕ್ಕಾಗಿ ವೈವಿಧ್ಯಮಯ ಸಾಧ್ಯತೆಗಳನ್ನು ಪ್ರದರ್ಶಿಸಿದರು. ಪರಿಸರ ಸಮತೋಲನವನ್ನು ಪುನಃಸ್ಥಾಪಿಸಲು ಹಸಿರು ಉದ್ಯೋಗಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಕರಾವಳಿ ಪ್ರದೇಶಗಳಲ್ಲಿ ಅಂತಹ ಆಲೋಚನೆಗಳನ್ನು ಪ್ರಾರಂಭಿಸಲು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.

ಗ್ರಾಮವಿದ್ಯಾ ಮಂಗಳೂರು ಕೇಂದ್ರದ ಸಂಯೋಜಕ ಸುಭಾಷ್‌ಚಂದ್ರ ಬಸು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಂಗತ್ಯ ಟ್ರಸ್ಟ್‌ನ ಶ್ರೀಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News