ಕಣ್ಣೂರು: ಅಲ್ ಬಿರ್ರ್ ಸ್ಕೂಲ್‌ನಲ್ಲಿ ಕಿಡ್ಸ್ ಫೆಸ್ಟ್
Update: 2023-12-30 22:56 IST
ಮಂಗಳೂರು : ಕಣ್ಣೂರು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿರುವ ಕಣ್ಣೂರು ಅಲ್ ಬಿರ್ರ್ ಸ್ಕೂಲ್‌ನಲ್ಲಿ ʼಕಿಡ್ಸ್ ಫೆಸ್ಟ್’ ಗುರುವಾರ ನಡೆಯಿತು.
ಕರ್ನಾಟಕ ರಾಜ್ಯ ಅಲ್ ಬಿರ್ರ್ ಸ್ಕೂಲ್ಸ್‌ನ ಸಂಯೋಜಕ ಶುಕೂರ್ ದಾರಿಮಿ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್‌ನ ಜೊತೆ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರೇರಣಾ ಭಾಷಣಗಾರ ಮುಹಮ್ಮದ್ ರಫೀಕ್ ಮಾಸ್ಟರ್ ಮತ್ತು ಸುಲ್ತಾನ್ ಆ್ಯಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಡಾ. ಟಿ.ಎಂ. ಅಬ್ದುಲ್ ರವೂಫ್ ಭಾಗವಹಿಸಿ ಮಾತನಾಡಿದರು.
ಸಂಚಾಲಕ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ಕಣ್ಣೂರು ಅಲ್ ಬಿರ್ರ್ ಸ್ಕೂಲ್ ಶಿಕ್ಷಕಿ ಝೈನಾ ಝಕರಿಯಾ ವಂದಿಸಿದರು. ವಿದ್ಯಾರ್ಥಿಗಳಾದ ಸಫರಾ ಮತ್ತು ರಝ್ವಾ ಕಾರ್ಯಕ್ರಮ ನಿರೂಪಿಸಿದರು.