×
Ad

ಅಲ್ ಮದ್ರಸತುಲ್ ಅಝ್ಹರಿಯದ ಅಧ್ಯಕ್ಷರಾಗಿ ಎಸ್.ಎಂ.ರಶೀದ್ ಹಾಜಿ ಅವಿರೋಧ ಆಯ್ಕೆ

Update: 2024-01-07 11:08 IST

ಹಾಜಿ ಎಸ್.ಎಂ.ರಶೀದ್

ಮಂಗಳೂರು, ಜ.7: 97 ವರ್ಷಗಳ ಇತಿಹಾಸವಿರುವ ಮಂಗಳೂರಿನ ಅಲ್ ಮದ್ರಸತುಲ್ ಅಝ್ಹರಿಯಾದ ನೂತನ ಅಧ್ಯಕ್ಷರಾಗಿ ಹಾಜಿ ಎಸ್.ಎಂ.ರಶೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಲ್ ಮದ್ರಸತುಲ್ ಅಝ್ಹರಿಯದ ಮಹಾಸಭೆಯು ಶನಿವಾರ ಅಝ್ಹರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಕೆ. ಅಶ್ರಫ್, ಹಾಜಿ ಸಿ.ಕೆ.ಅಹ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್, ಜೊತೆ ಕಾರ್ಯದರ್ಶಿಗಳಾಗಿ ಹಾಜಿ ಅಬ್ದುಲ್ ಖಾದರ್ ಕಂದಕ್, ಹಾಜಿ ರಿಯಾಝುದ್ದೀನ್ ಕಚ್ಚಿಮನ್, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಗಫೂರ್, ಹೆಡ್ ಮದ್ರಸದ ಮ್ಯಾನೇಜರ್ ಗಳಾಗಿ ಹಾಜಿ ಫಝಲ್ ಮುಹಮ್ಮದ್, ಹಾಜಿ ಅರ್ಶದ್, ಬ್ರಾಂಚ್ ಮದ್ರಸದ ಮ್ಯಾನೇಜರ್ ಗಳಾಗಿ ಹಾಜಿ ರಿಯಾಝುದ್ದೀನ್, ಅಶ್ರಫ್ ಹಳೆಮನೆ, ಪುಡ್ ಇನ್ಚಾರ್ಜ್ ಹಾಜಿ ಇಬ್ರಾಹೀಂ ಕಂದಕ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಹಾಜಿ ಇಸ್ಮಾಯೀಲ್, ಹಾಜಿ ಅಬ್ದುಲ್ ಸಮದ್, ಸಫ ಸಲೀಂ, ಹಾಜಿ ಮೊಯ್ದಿನ್, ಎಸ್.ಎಂ.ರಿಯಾಝ್, ಝಾಕೀರ್ ತೂಸಿಮನೆ, ಅದ್ದು ಹಾಜಿ, ಸಲಾಂ ಕಂದಕ್, ಅಬ್ದುಲ್ ಹಮೀದ್ ಕಚ್ಚಿಮನೆ, ಝಾಕೀರ್ ಕೋಝೀ, ಅಶ್ರಫ್ ಟಿ.ಸಿ., ಮುನಾವರ್, ಕೆ.ಪಿ. ರಶೀದ್, ಯಹ್ಯಾ ಕಂದಕ್ ಮೊದಲಾದವರು ಅವಿರೋಧವಾಗಿ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಜಿ ಎಸ್.ಎಂ.ರಶೀದ್ ಅವರು ಕಳೆದ 14 ವರ್ಷಗಳಿಂದ ಉಪಾಧ್ಯಕ್ಷರಾಗಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News