×
Ad

ಭಟ್ಕಳ: ಸಮಾಜ ಸೇವಕ ಜಾವೀದ್ ಮುಕ್ರಿಗೆ ಜೆಸಿಐ ಸನ್ಮಾನ

Update: 2024-01-30 19:18 IST

ಭಟ್ಕಳ: ಭಟ್ಕಳದಲ್ಲಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಾವೀದ್ ಮುಕ್ರಿಯವರಿಗೆ ಜೆಸಿಐ ಭಟ್ಕಳ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಿದೆ.

ಜ.28ರಂದು ನಗರದ ಆಮೀನಾ ಪ್ಯಾಲೇಸ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿಂದೆ ಯಾವುದೇ ಸ್ವಾರ್ಥವಿಲ್ಲ. ಎಲ್ಲ ಸಮುದಾಯಗಳಿಗೂ ನೆರವಾಗಬೇಕು. ನನ್ನಿಂದ ಇನ್ನೊಬ್ಬರಿಗೆ ಸಹಾಯ ದೊರಕಬೇಕು ಎನ್ನುವ ಉದ್ದೇಶದೊಂದಿಗೆ ನಾನು ಸಾಮಾಜಿಕ ಕಾರ್ಯಗಳಲ್ಲಿ ನಿರತನಾಗಿದ್ದೇನೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನನ್ನ ಸಮಾಜಸೇವೆಯಲ್ಲಿ ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ನೆರವಾಗಿ ದ್ದಾರೆ. ಯಾವುದೇ ಸಂದರ್ಭದಲ್ಲಿ ನಾನು ಸಾರ್ವಜನಿಕರ ಸೇವೆಗೆ ಸಿದ್ಧನಾಗಿದ್ದೇನೆ ಎಂದು ಹೇಳಿದರು.

ಭಟ್ಕಳ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಜಾತಿ ಭಾಷೆ ಎನ್ನದೆ ಎಲ್ಲರ ನೆರವಿಗೆ ಧಾವಿಸುವ ಜಾವೀದ್ ಮುಕ್ರಿ ವೃತ್ತಿ ಯಲ್ಲಿ ರಿಕ್ಷಾಚಾಲಕರು. ಇವರು ತಮ್ಮ ವೃತ್ತಿಯಿಂದಲೇ ಸಮಾಜಸೇವೆಯನ್ನು ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹ

ಈ ಸಂದರ್ಭದಲ್ಲಿ ಜೆಸಿಐ ಪ್ರಮುಖರಾದ ಅಬ್ದುಲ್ ಜಬ್ಬಾರ್, ಸುರೇಶ ಪುಜಾರಿ, ಸೌಜನ್ಯ ಪುಜಾರಿ, ವಿಜ್ಞೇಶ್ ಪ್ರಸಾದ್, ಚಂದ್ರಕಾಂತ್ ಕಿಣಿ, ಮನೋಹರ್ ನಾಯ್ಕ, ಶಾಹೀನಾ ಶೇಖ್, ತನುಜಾ ನಾಯ್ಕ, ಜವೇರಿಯಾ ಶೇಖ್, ಪಲ್ಲವಿ ಕಿಣಿ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News