ಭಟ್ಕಳ: ಡಿ. 13–14ರಂದು ಅಂಜುಮನ್ ದಿನಾಚರಣೆ
ಭಟ್ಕಳ: ಅಂಜುಮನ್ ಹಾಮಿ–ಎ–ಮುಸ್ಲಿಮೀನ್ ವತಿಯಿಂದ ಡಿಸೆಂಬರ್ 13 ಮತ್ತು 14ರಂದು ಅಂಜುಮನ್ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮ ಅಂಜುಮನ್ ಆಬಾದ್ ಆವರಣದಲ್ಲಿ ನಡೆಯಲಿದೆ.
ಡಿ. 13 ಮೊದಲ ದಿನ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಾಂಕಾಳ ಎಸ್. ವೈದ್ಯ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಡಾ. ಯು.ಟಿ. ಖಾದರ್, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕುಲಪತಿ ಡಾ. ಎ.ಎಂ. ಖಾನ್, ಮತ್ತು ಶಾಹೀನ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಬ್ದುಲ್ ಖಾದೀರ್ ಹಾಜರಾಗಲಿದ್ದಾರೆ. ಅಂಜುಮನ್ ಅಧ್ಯಕ್ಷ ಯೂನಸ್ ಕಾಜಿಯಾ ಅಧ್ಯಕ್ಷತೆ ವಹಿಸಲಿದ್ದು, ಸಂಜೆ 4:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಡಿ. 14 – ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ: ಎರಡನೇ ದಿನದ ಕಾರ್ಯಕ್ರಮವು ಮಹಿಳೆಯರಿಗೆ ಮಾತ್ರ ಆಯೋಜಿಸಲ್ಪಟ್ಟಿದ್ದು, ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಕಾವ್ಯಾ ರಾಣಿ ಕೆ.ವಿ. ಉಪಸ್ಥಿತರಿರುವರು.
ಗೌರವ ಅತಿಥಿಗಳಾಗಿ ಭಟ್ಕಳ ಅರ್ಬನ್ ಸಹಕಾರಿ ಬ್ಯಾಂಕ್ ನಿರ್ದೇಶಕಿ ಬೀನಾ ಮಂಕಾಳ ವೈದ್ಯ, ಜಿಲ್ಲಾ ಸೈಬರ್ ಕ್ರೈಂ ಉಪಅಧೀಕ್ಷಕಿ ಅಶ್ವಿನಿ ಕುಮಾರ್, ಮತ್ತು ಮಹಿಳಾ ಸಲಹಾ ಸಮಿತಿ ಅಧ್ಯಕ್ಷೆ ಸೀಮಾ ಅಬೂಬಕರ್ ಸೇರಲಿದ್ದಾರೆ.
ಅಧ್ಯಕ್ಷತೆಯನ್ನು ಯೂನಸ್ ಕಾಜಿಯಾ ವಹಿಸಲಿದ್ದು, ಮಧ್ಯಾಹ್ನ 2:30ರಿಂದ ಮಹಿಳೆಯರ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ ಎಂದು ಕಾರ್ಯಕ್ರಮದ ಸಂಚಾಲಕ ಪ್ರೊ. ಮೊಹಮ್ಮದ್ ಮೊಹ್ಸಿನ್ ಕೆ. ಮಾಹಿತಿ ನೀಡಿದ್ದಾರೆ.