ಕೈಬರಹ ಸ್ಪರ್ಧೆ: ನೀರ್ಕಜೆ ಮದ್ರಸ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ
Update: 2024-02-14 18:06 IST
ಮಿಶ್ಬಾ ರಿಫಾ, ಫಾತಿಮತ್ ಜಿಶಾನ,
ಝುಲ್ಫಾ ಮರಿಯಂ, ಆಯಿಶಾ ಮುನೀಬ, ಫಾತಿಮತ್ ಫರ್ಹಾನ
ನೀರ್ಕಜೆ: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆದ ರಾಜ್ಯಮಟ್ಟದ ಮುಸಾಬಕ 2024ರ ಕೈಬರಹ ಸ್ಪರ್ಧೆಯಲ್ಲಿ ನೀರ್ಕಜೆ ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪರಿಯಾಲ್ತಡ್ಕ ಜಮಾಅತ್ ಕಮಿಟಿಯ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದ್ರಸ ನೀರ್ಕಜೆ ವಿದ್ಯಾರ್ಥಿನಿಯರಾದ ಮಿಶ್ಬಾ ರಿಫಾ, ಫಾತಿಮತ್ ಜಿಶಾನ, ಝುಲ್ಫಾ ಮರಿಯಂ, ಆಯಿಶಾ ಮುನೀಬ, ಫಾತಿಮತ್ ಫರ್ಹಾನ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಶಮ್ಮಾಸ್ ಕೌಸರಿ ಅಲ್ ಯಮಾನಿ ಕರಾಯ ಅವರು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ್ದರು. ಅವರನ್ನು ಜಮಾಅತ್ ಕಮಿಟಿ ಅಭಿನಂದಿಸಿದೆ.