ಮಂಗಳೂರು : ತನಿಷ್ಕ್‌ನ ನವೀಕೃತ ಆಭರಣದ ಮಳಿಗೆ ಆರಂಭ
ಮಂಗಳೂರು: ಟಾಟಾ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರಿಟೇಲ್ ಬ್ರ್ಯಾಂಡ್ ಆಗಿರುವ ತನಿಷ್ಕ್‌ನ ನವೀಕೃತ ಭವ್ಯ ಮಳಿಗೆ ಮಂಗಳೂರಿನ ಲೋವರ್ ಬೆಂದೂರ್‌ವೆಲ್‌ನಲ್ಲಿ ಗುರುವಾರ ಪುನರ್ ಆರಂಭಗೊಂಡಿದೆ.
ಟಾಟಾ ಸನ್ಸ್ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಹಾಗೂ ರೀಜಿನಲ್ ಬಿಸ್ನೆಸ್ ಹೆಡ್ ಅಜಯ್ ದ್ವಿವೇದಿ ಅವರು ಆಭರಣ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತನಿಷ್ಕ್ಕ್‌ನ ದಕ್ಷಿಣದ ಪ್ರಾದೇಶಿಕ ವ್ಯಾಪಾರ ವ್ಯವಸ್ಥಾಪಕ ವಾಸುದೇವರಾವ್ ಅವರು ಮಂಗಳೂರು ತನಿಷ್ಕ್ ಶೋರೂಮ್‌ನ್ನು ಭವ್ಯವಾಗಿ ಪುನರ್ ಆರಂಭಿಸಿರುವುದಾಗಿ ಘೋಷಿಸಲು ಸಂತೋಷವಾಗುತ್ತದೆ. ತನಿಷ್ಕ್ಕ್ ಬಗ್ಗೆ ಗ್ರಾಹಕರ ತೃಪ್ತಿಯನ್ನು ಖಚಿತಪಡಿಸುವುದು ನಮ್ಮ ಪ್ರಮುಖ ಬದ್ಧತೆಯಾಗಿದೆ. ತನಿಷ್ಕಾದ ಉತ್ಪನ್ನಗಳನ್ನು ಮಂಗಳೂರಿನಲ್ಲಿ ಪ್ರೀತಿಯ ಆಭರಣ ಬ್ರ್ಯಾಂಡ್ ಆಗಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ನಾವು ಸತತ ವಾಗಿ ಶ್ರಮಿಸುತ್ತೇವೆ ಎಂದರು.
ಟಾಟಾ ಸಮೂಹಕ್ಕೆ ಸೇರಿದ ಭಾರತದ ಅತ್ಯಂತ ಪ್ರೀತಿಯ ಆಭರಣ ಬ್ರ್ಯಾಂಡ್ ತನಿಷ್ಕ್ಕ್ ಆಗಿದೆ. ಎರಡು ದಶಕಗಳಿಂದ ಉತ್ಕೃಷ್ಟತೆ ಕರಕುಶಲತೆ, ವಿಶೇಷ ವಿನ್ಯಾಸಗಳು ಮತ್ತು ಉತ್ತಮ ಗುಣಮಟ್ಟದ ಆಭರಣಗಳಿಗೆ ಹೆಸರುವಾಸಿಯಾಗಿದೆ. ಪ್ರಸ್ತುತ 220ಕ್ಕೂ ಹೆಚ್ಚು ನಗರಗಳಲ್ಲಿ 400ಕ್ಕೂ ಅಧಿಕ ವಿಶೇಷ ಮಳಿಗೆಗಳನ್ನು ಹೊಂದಿದೆ ಎಂದರು.
ಮಂಗಳೂರಿನ ನವೀಕೃತ ಶೋರೂಮ್ 6200 ಚದರ ಅಡಿಗಳಷ್ಟು ವ್ಯಾಪಿಸಿದ್ದು, ಬೆರಗುಗೊಳಿಸುವ ಚಿನ್ನ ಮತ್ತು ವಜ್ರದ ಆಭರಣಗಳ ಸೊಗಸಾದ ಸಂಗ್ರಹವನ್ನು ಹೊಂದಿದೆ. ಇದರಲ್ಲಿ ಕುಂದನ್ ಮತ್ತು ಪೋಲ್ಕಿಯಂತಹ ಸಾಂಪ್ರದಾಯಿಕ ತನಿಷ್ಕ್ ವಿನ್ಯಾಸಗಳ ವ್ಯಾಪಕ ಆಯ್ಕೆಯನ್ನು ಒದಗಿಸುತ್ತದೆ. ‘ಧಾರೋಹರ್’, ಕರಿಗಾರ್, ಅಲೇಖ್ಯಾ, ಡೋರ್, ‘ಅವೀರ್’ ಆಭರಣಗಳು, ಸಮಕಾಲೀನ ಮತ್ತು ಹಗುರವಾದ ಅಭರಣ ‘ಸ್ಟ್ರೀಂಗ್ ಇಟ್’ ಇತ್ತೀಚಿನ ವಜ್ರ ಆಭರಣಗಳ ಸಾಲು ‘ಇಂಪ್ರೆಶನ್ಸ್‌ಆಫ್ ನೇಚರ್’ನಂತಹ ಯಾವುದೇ ಮೇಳಕ್ಕೆ ಗ್ಲಾಮರ್ ಸ್ಪರ್ಶವನ್ನು ಸೇರಿಸಲು ಅದ್ಭುತವಾದ ನೈಸರ್ಗಿಕ ವಜ್ರಗಳ ಸಂಗ್ರಹವನ್ನು ಈ ಮಳಿಗೆ ಹೊಂದಿದೆ ಎಂದು ಮಾಹಿತಿ ನೀಡಿದರು.
ವೆಸ್ಟ್‌ಕೋಸ್ಟ್ ಗ್ರೂಪ್‌ನ(ತನಿಷ್ಕ್ ಫ್ರಾಂಚೈಸಿ) ಖಾದರ್ ಹಾರೊನ್, ಇಸ್ಮಾಯೀಲ್ ಹಾರೊನ್,ರಫೀಕ್ ಹಾರೊನ್ ಉಪಸ್ಥಿತರಿದ್ದರು.