ಹೋಮ್ ನರ್ಸ್ ನಾಪತ್ತೆ
Update: 2024-11-30 23:03 IST
ಮಂಗಳೂರು: ನಗರದ ಪಾಂಡೇಶ್ವರದಲ್ಲಿ ಮನೆಯೊಂದರಲ್ಲಿ ಹೋಮ್ ನರ್ಸ್ ಆಗಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ರಮೇಶ್ ರಾಮ್ ಬಿ.ಕೆ (40) ನಾಪತ್ತೆಯಾದವರು.
ರಮೇಶ್ ರಾಮ್ ಅವರು 4 ತಿಂಗಳ ಹಿಂದೆ ಪಾಂಡೇಶ್ವರದ ನಿವಾಸಿ ಖಾಲಿದ್ ಮೊಹಮ್ಮದ್ ಅವರ ಮನೆಗೆ ಹೋಮ್ ನರ್ಸ್ ಆಗಿ ಸೇರಿಕೊಂಡಿದ್ದರು. ನ.11ರಂದು ಇವರು ಬೆಳಗ್ಗೆ ಖಾಲಿದ್ ಮೊಹಮ್ಮದ್ ಮನೆಯಿಂದ ಅವರಿಗೆ ತಿಳಿಸದೆ ಹೊರಟು ಹೋದವರು ಮರಳಿ ಬಂದಿಲ್ಲ ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.