ಕಲ್ಲಾಪು: ಕುರ್‌ಆನ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ
ಮಂಗಳೂರು : ಮದ್ರಸಾ ಅಸೋಸಿಯೇಷನ್ ವತಿಯಿಂದ ಕುರ್‌ಆನ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಕಲ್ಲಾಪು ಯೂನಿಟಿ ಹಾಲ್ ನಲ್ಲಿ ಜ.24ರಂದು ನಡೆಯಿತು.
ಕುರ್‌ಆನ್ ಸ್ಪರ್ಧೆಯು ಜ.19ರಂದು ಮಂಗಳೂರಿನ ಬೋಳಾರ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆದಿತ್ತು. 30 ಮದ್ರಸಾಗಳಿಂದ ಸುಮಾರು 200 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೌಲಾನಾ ಯಹ್ಯಾ ತಂಙಳ್ ಭಾಗವಹಿಸಿದ್ದರು. ಮುಹಮ್ಮದ್ ಫರ್ಹಾನ್ ನದ್ವಿ ಅವರು ಉದ್ಘಾಟನಾ ಭಾಷಣವನ್ನು ನೆರವೇರಿಸಿದರು. ಕರ್ನಾಟಕ ಸಲಫಿ ಅಸೋಸಿಯೇಷನ್ ನ ಮದ್ರಸಾ ವಿಂಗ್ (ಕೆಎಸ್ಇಬಿ)ನ ಇಜಾಝ್ ಸ್ವಲಾಹಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಇಂತಹ ಸಂಘಗಳ ಮಹತ್ವದ ಬಗ್ಗೆ ಹೇಳಿದ್ದಾರೆ.
ದೀನಿಯಾತ್ ಮಂಗಳೂರು ಘಟಕದ ಮುಖ್ಯಸ್ಥ ಮೌಲಾನಾ ನಿಝಾಮುದ್ದೀನ್ ಮಾತನಾಡಿ, ಕುರಾನ್ ನ ಮಹತ್ವ ಮತ್ತು ಅದರ ಬೋಧನೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ವಿವರಿಸಿದರು.
ಜಮಾತ್-ಎ-ಇಸ್ಲಾಮಿಯ ಎಜುಕೇಶನಲ್ ಕೌನ್ಸಿಲ್ ನ ಪ್ರತಿನಿಧಿ ಸಯೀದ್ ಇಸ್ಮಾಯಿಲ್, ಎಸ್ ಕೆಎಸ್ಎಂ ಮದ್ರಸಾ ವಿಭಾಗ ಎಸ್ ಇಬಿಯ ಅಧ್ಯಕ್ಷ ಮುಹಮ್ಮದ್ ಹನೀಫ್ ಬೋಳಂತೂರು, ಹೀರಾ ಸಂಸ್ಥೆಯ ಮೌಲಾನಾ ಶುಐಬ್ ಹುಸೇನಿ ನದ್ವಿ, ಇಖ್ರಾ ಅರೇಬಿಕ್ ಸ್ಕೂಲ್ ಪ್ರಾಂಶುಪಾಲರಾದ ಮೌಲಾನಾ ಸಾಲಿಂ ನದ್ವಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಅಲ್ ಕಲಂ ಸಂಸ್ಥೆಯ ಮರೂಫ್, ಬೋಳಾರ್ ಇಸ್ಲಾಮಿಕ್ ಸೆಂಟರ್ ಉಪಾಧ್ಯಕ್ಷ ಅಬ್ದುಲ್ ಹಮೀದ್, ಯುನಿಟಿ ಹಾಲ್ ಮಾಲಕ ಫೈಝಲ್ ನಾಟೆಕಲ್ ಉಪಸ್ಥಿತರಿದ್ದರು.