×
Ad

ಗಾಂಧಿ ಮೌಲ್ಯಗಳ ಅಳವಡಿಕೆ, ಆಚರಣೆ ಮುಖ್ಯ: ಸ್ಪೀಕರ್ ಯು.ಟಿ.ಖಾದರ್

Update: 2025-01-30 22:06 IST

ಮಂಗಳೂರು:‌ ಗಾಂಧಿ ‌ಮೌಲ್ಯಗಳ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಆಚರಣೆ ಮಾಡುವ ಅಗತ್ಯವಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಯು.ಟಿ ಖಾದರ್ ತಿಳಿಸಿದ್ದಾರೆ.

ಅವರು ಗುರುವಾರ ನಗರದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯ ದಲ್ಲಿ,ಗಾಂಧಿ ಪುಣ್ಯ ತಿಥಿ ದಿನವನ್ನು ಸಮನ್ವಯ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಅವರು ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ಮಾತನಾಡಿದರು. ಗಾಂಧಿ ‌ಚಿಂತನೆಗಳು ಸಕಾಲಿಕ ವಾಗಿದೆ ಎಂದು ಗಾಂಧಿ ಮೌಲ್ಯ ಗಳ ಪ್ರಾಮುಖ್ಯವನ್ನು ಒತ್ತಿ ಹೇಳಿದರು.

ಖ್ಯಾತ ಚಿಂತಕ ಡಾ.ಪ್ರಭಾಕರ ಶಶಿಲ ಅವರು ತಮ್ಮ ಭಾಷಣದಲ್ಲಿ ಗಾಂಧೀಜಿಯವರ ಭೌತಿಕ ದೇಹ ಇಂದು ನಮ್ಮೊಂದಿಗೆ ಇಲ್ಲ, ಆದರೆ ಅವರ ಬೌದ್ಧಿಕತೆ ಸದಾ ನಮಗೆ ಮಾರ್ಗದರ್ಶಕವಾಗಿದೆ.ಗಾಂಧಿ ಮೌಲ್ಯಗಳಿಗೆ ಎಂದೂ ಸಾವಿಲ್ಲ. ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ಗಾಂಧಿ ಮೌಲ್ಯಗಳನ್ನು ಅನುಸರಿದರೆ ಸಮನ್ವಯ ಭಾರತದ ಕನಸು ನನಸಾಗುತ್ತದೆ. ಮುಖ್ಯ ಅತಿಥಿಯಾಗಿ ‌ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪ್ರವೀಣ್ ವಿಜಯ್ ಮಾರ್ಟಿಸ್ ಅವರು ಗಾಂಧಿ ಸಂದೇಶ ನೀಡಿದರು.

ಕಾರ್ಯ ಕ್ರಮದಲ್ಲಿ ಯು.ಟಿ.ಖಾದರ್ ಹಾಗೂ ಡಾ.ಪ್ರವೀಣ್ ಮಾರ್ಟ್ ಸ್‌ ಅವರನ್ನುಸನ್ಮಾನಿಸಲಾಯಿತು.ಡಾ.ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ‌ ಕಾರ್ಯ ಕ್ರಮದಲ್ಲಿ ಪ್ರಭಾಕರ್ ಶ್ರೀಯಾನ್, ಹಾಜಿ ಇಬ್ರಾಹಿಂ ಕೋಡಿಜಾಲ್ ಉಪಸ್ಥಿತಿರಿದ್ದರು.ಡಾ.ಇಸ್ಮಾಯಿಲ್ ಅವರು ಸ್ವಾಗತಿಸಿದರು,ಪ್ರೇಮಚಂದ್ ಅವರು ವಂದಿಸಿದರು.ನಾಗೇಶ್ ಕಲ್ಲೂರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಸಿಯಾ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧಿ ಭಜನೆ, ಬಲ್ಮಠದ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ಗಳಿಂದ ದೇಶಭಕ್ತಿ ಗೀತೆ ಕಾರ್ಯ ಕ್ರಮ ನಡೆಯಿತು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ.ದಿನೇಶ್ ನಾಯಕ್ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News