×
Ad

ಮುಂದಿನ ವರ್ಷದ ಪವಿತ್ರ ಹಜ್ ಯಾತ್ರೆಗೆ ವಾರದೊಳಗೆ ಅರ್ಜಿ ಸಲ್ಲಿಕೆ ಆರಂಭ

Update: 2025-07-06 20:41 IST

ಮಂಗಳೂರು: ಮುಂದಿನ ವರ್ಷದ ಪವಿತ್ರ ಹಜ್ ಯಾತ್ರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವಾರದೊಳಗೆ ಆರಂಭಗೊಳ್ಳಲಿದೆ.

2026ರಲ್ಲಿ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಬಯಸುವ ಯಾತ್ರಿಕರು ನಿಗದಿತ ಸಮಯದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

ಸರಕಾರವು 2026ರ ಹಜ್ ಅರ್ಜಿಗಳನ್ನು ಒಂದು ವಾರದೊಳಗೆ ಸ್ವೀಕರಿಸಲು ಪ್ರಾರಂಭಿಸಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಆದುದರಿಂದ ಹಜ್ ಯಾತ್ರೆ ಕೈಗೊಳ್ಳಲು ಬಯಸುವವರು ತಮ್ಮ ಪಾಸ್‌ಪೋರ್ಟ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಕರ್ನಾಟಕ ಹಜ್ ಸಮಿತಿ ಸದಸ್ಯ ಸೈಯದ್ ಅಶ್ರಫ್ ತಂಙಳ್ ಆದೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News