×
Ad

ನಗರದಲ್ಲಿ ನಾಲ್ಕನೇ ಆವೃತ್ತಿಯ ʼನೀವಿಯಸ್ ಮಂಗಳೂರು ಮ್ಯಾರಥಾನ್ʼ

ದೇಶ -ವಿದೇಶಗಳ ಓಟಗಾರರು ಭಾಗಿ

Update: 2025-11-09 19:30 IST

ಮಂಗಳೂರು: ನಗರದಲ್ಲಿ ರವಿವಾರ ನಡೆದ ಪ್ರತಿಷ್ಠಿತ ನೀವಿಯಸ್ ಮಂಗಳೂರು ಮ್ಯಾರಥಾನ್‌ನ 4ನೇ ಆವೃತ್ತಿಯ ಸ್ಪರ್ಧೆಯಲ್ಲಿ ದೇಶ -ವಿದೇಶಗಳ ಓಟಗಾರರು ಪಾಲ್ಗೊಂಡರು. ಮಂಗಳೂರು ರನ್ನರ್ಸ್ ಕ್ಲಬ್ (ಎಂಆರ್‌ಸಿ) ಆಯೋಜಿಸಿದ ಮ್ಯಾರಥಾನ್ ನಲ್ಲಿ ಆಸ್ಟ್ರೇಲಿಯ, ಜಪಾನ್, ಡೆನ್ಮಾರ್ಕ್, ನೈಜೀರಿಯಾ ಮತ್ತು ಭಾರತದ ವಿವಿಧ ರಾಜ್ಯಗಳ ಪ್ರತಿನಿಧಿನಿಧಿಗಳು ಸೇರಿದಂತೆ 6,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.

ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪೂರ್ಣ ಮ್ಯಾರಥಾನ್ (42.195 ಕಿಮೀ), 20 ಮೈಲರ್ (32 ಕಿಮೀ), ಹಾಫ್ ಮ್ಯಾರಥಾನ್ (21.1 ಕಿಮೀ), 10ಕೆ ಓಟ, 5 ಕೆ ಓಟ, ಮತ್ತು 2 ಕೆ ಗಮ್ಮತ್ ಓಟ - ಎಲ್ಲ ವಯೋಮಾನದ ಕ್ರೀಡಾಪಟುಗಳು, ಹವ್ಯಾಸಿ ಓಟಗಾರರು ಮತ್ತು ಫಿಟ್ನೆಸ್ ಉತ್ಸಾಹಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಪೂರ್ಣ ಮ್ಯಾರಥಾನ್‌ಗೆ ಬೆಳಗ್ಗೆ 4:15ಕ್ಕೆ ಕೊಚ್ಚಿಯ ಅನುಭವಿ ಓಟಗಾರ ಮತ್ತು ಎನ್‌ಐಟಿಕೆಯ ಹಳೆ ವಿದ್ಯಾರ್ಥಿ 76ರ ಹರೆಯದ ಜಾನ್ಸನ್ ಪಾಲ್ ಮೊಯಲನ್ ಅವರು ಚಾಲನೆ ನೀಡಿದರು. ಅವರು ಈ ಆವೃತ್ತಿಯಲ್ಲಿ ಭಾಗವಹಿಸುವ ಮೂಲಕ ನಿವಿಯಸ್ ಮಂಗಳೂರು ಮ್ಯಾರಥಾನ್‌ನಲ್ಲಿ ಮೂರು ಪೂರ್ಣ ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದರು. ನಿವಿಯಸ್ ಸೊಲ್ಯೂಷನ್ಸ್‌ನ ಚೀಫ್ ಗ್ರೋಥ್ ಆಫೀಸರ್ ಶಶಿರ್ ಶೆಟ್ಟಿ ಅವರೊಂದಿಗೆ 120 ಓಟಗಾರರು ಪಾಲ್ಗೊಂಡಿದ್ದರು.

ನಿವಿಯಸ್ ಸೊಲ್ಯೂಷನ್ಸ್‌ನ ಮಾರ್ಕೆಟಿಂಗ್ ನಿರ್ದೇಶಕ ಅಭಿಷೇಕ್ ಹೆಗ್ಡೆ ಅವರು ಬೆಳಿಗ್ಗೆ 4:45 ಕ್ಕೆ ಫ್ಲ್ಯಾಗ್ ಆಫ್ ಮಾಡಿದ 20 ಮೈಲು ಓಟದಲ್ಲಿ 150 ಓಟಗಾರರು ಭಾಗವಹಿಸಿದ್ದರು.

ಬೆಳಿಗ್ಗೆ 5:15 ಕ್ಕೆ ಆರಂಭವಾದ ಹಾಫ್ ಮ್ಯಾರಥಾನ್‌ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಚಾಲನೆ ನೀಡಿದರು.

ನೀವಿಯಸ್ ಸೊಲ್ಯೂಷನ್ಸ್ ಸಿಇಒ ಸುಯೋಗ್ ಶೆಟ್ಟಿ , ಆಸ್ಟ್ರೇಲಿಯಾದ ಎನ್‌ಟಿಟಿ ಡೇಟಾದ ಎಐ ವಿಭಾಗದ ಹಿರಿಯ ನಿರ್ದೇಶಕ ಗ್ಲೆನ್ ಹ್ಯಾನಿಗನ್ ,ಸಿಂಗಾಪುರದ ಎನ್‌ಟಿಟಿ ಡೇಟಾ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿರ್ದೇಶಕ ಬೆನ್ ತುಲ್ಲೊಚ್, ಯೆನೆಪೋಯ ಸ್ಕೂಲ್‌ನ ನಿರ್ದೇಶಕ ಜಾವೀದ್ ಯೆನೆಪೋಯ ಮತ್ತು ಮಿಸ್ರಿಯಾ ಜಾವೀದ್, ಯೆನೆಪೋಯ ಸ್ಕೂಲ್‌ನ ಅಸೋಸಿಯೇಟ್ ನಿರ್ದೇಶಕ ಆಂಥೋನಿ ಜೋಸೆಫ್ ಮತ್ತು ಯೆನೆಪೋಯ ಸ್ಕೂಲ್‌ನ ಪ್ರಾಂಶುಪಾಲ ಉಜ್ವಲ್ ರಾಡ್ನಿ ಮೆನೆಜಸ್ ಸೇರಿದಂತೆ ಓಟದಲ್ಲಿ 700 ಮಂದಿ ಇದ್ದರು.

ಸುಮಾರು 3,000 ಮಂದಿ ಪಾಲ್ಗೊಂಡಿದ್ದ ಅತ್ಯಂತ ಜನಪ್ರಿಯ ವಿಭಾಗವಾದ 5ಕೆ ಓಟವನ್ನು ಬೆಳಗ್ಗೆ 7:15 ಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಚಾಲನೆ ನೀಡಿದರು. ಎಸಿಪಿ ಗೀತಾ ಕುಲಕರ್ಣಿ, ಮತ್ತು ಪೀಪಲ್ ಆಪರೇಷನ್ಸ್, ನೀವಿಯಸ್ ಸೊಲ್ಯೂಷನ್ಸ್ಉ ಪಾಧ್ಯಕ್ಷೆ ಶಿಪ್ರಾ ರೈ ಉಪಸ್ಥಿತರಿದ್ದರು.

2ಎ ಗಮ್ಮತ್ ಓಟಕ್ಕೆ ಬೆಳಿಗ್ಗೆ 8:00 ಗಂಟೆಗೆ ಎಸಿಪಿ ನಜ್ಮಾ ಫಾರೂಕಿ, ನೀವಿಯಸ್ ಸೊಲ್ಯೂಷನ್ಸ್ ನಿರ್ದೇಶಕಿ ಲುವ್ಲಿನ್ ಡಿ ಸೋಜ ಚಾಲನೆ ನೀಡಿದರು.

ಶಾಸಕ ವೇದವ್ಯಾಸ್ ಕಾಮತ್ ,ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷ ಜೋಯಲ್ ಡಿ ಸೋಜ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

►ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ತಮ್ಮ 21.1 ಕಿ.ಮೀ ಓಟವನ್ನು 2:17.37 ಗಂಟೆಗಳಲ್ಲಿ ಪೂರ್ಣಗೊಳಿಸಿದರು. ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ವೈ.ಕೆ. ದಿನೇಶ್ ಕುಮಾರ್ 21.1 ಕಿ.ಮೀ ಓಟವನ್ನು 2:42.02 ಗಂಟೆಗಳಲ್ಲಿ ಪೂರ್ಣಗೊಳಿಸಿದರು.

►ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ 46.13 ನಿಮಿಷಗಳಲ್ಲಿ 5 ಕಿ.ಮೀ ಓಟ ಪೂರ್ಣಗೊಳಿಸಿದರು.

ಬೆಳಗ್ಗೆ 6:00ಕ್ಕೆ ಆರಂಭಗೊಂಡ 10 ಕೆ ಓಟದಲ್ಲಿ 1,500 ಮಂದಿ ಭಾಗವಹಿಸಿದ್ದರು .

►20 ಮೈಲರ್ (32 ಕಿ.ಮೀ) ಮತ್ತು 21.1 ಕಿ.ಮೀ ಹಾಫ್ ಮ್ಯಾರಥಾನ್ ಓಟಗಳನ್ನು ಓಡಿದವರಲ್ಲಿ 68 ವರ್ಷದ ನಗರ ಆಟೋರಿಕ್ಷಾ ಚಾಲಕ ಮಾಧವ ಸರಿಪಲ್ಲ ಸೇರಿದ್ದಾರೆ. ಅವರು 20 ಮೈಲರ್ ಓಟವನ್ನು 3:26.07 ಗಂಟೆಗಳಲ್ಲಿ ಪೂರ್ಣಗೊಳಿಸಿದರು.

►ಬರಿಗಾಲಿನಲ್ಲಿ ಓಡಿದ ಥಾಮಸ್ ಬಾಬಿ ಫಿಲಿಪ್ ತಮ್ಮ 20 ಮೈಲರ್ ಓಟವನ್ನು 2:25.30 ಗಂಟೆಗಳಲ್ಲಿ ಪೂರ್ಣಗೊಳಿಸಿದರೆ, ಕೇಪ್ ಟೌನ್‌ನ ಮ್ಯಾರಥಾನ್ ಓಟಗಾರ ಅಶ್ರಫ್ ಓರಿ ತಮ್ಮ 20 ಮೈಲರ್ ಓಟವನ್ನು 3:33.40 ಗಂಟೆಗಳಲ್ಲಿ ಪೂರ್ಣಗೊಳಿಸಿದರು.

►ಹೊನ್ನಾವರ ಮೂಲದ ಓಟಗಾರ ದೀಪಾ ನಾಯಕ್ ತಮ್ಮ 21 ಕಿ.ಮೀ ಓಟವನ್ನು 1:44.19 ಗಂಟೆಗಳಲ್ಲಿ ಪೂರ್ಣಗೊಳಿಸಿದರು.

►ಉತ್ಸಾಹಿ ಓಟಗಾರ್ತಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಶಾಂತಿ ಕೃಷ್ಣನ್ ತಮ್ಮ 21 ಕಿ.ಮೀ ಓಟವನ್ನು 2:15.24 ಗಂಟೆಗಳಲ್ಲಿ ಪೂರ್ಣಗೊಳಿಸಿದರು.

►ಎಲ್ಲಾ ಫಿನಿಶರ್‌ಗಳು ಓಡುವ ಹುಲಿ ಚಿತ್ರದ ಪದಕವನ್ನು ಪಡೆದರು.

►ಗುಜರಾತ್‌ನ ಮಂಗಳೂರು ಮ್ಯಾರಥಾನ್ ಓಟದ ರಾಯಭಾರಿ ಸತಕ್ ಮಲಾನಿ ಅವರಂತಹ ಓಟಗಾರರು ಹುಲಿಯ ಚರ್ಮವನ್ನು ಹೋಲುವ ಶಾರ್ಟ್ಸ್ ಧರಿಸಿ ಹಾಫ್ ಮ್ಯಾರಥಾನ್ ಓಡಿದರು.

►10 ಕಿ.ಮೀ ಮತ್ತು 5 ಕಿ.ಮೀ ವಿದ್ಯಾರ್ಥಿಗಳ ಓಟದಲ್ಲಿ ಉತ್ತಮ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

►ಪೂರ್ಣ ಮ್ಯಾರಥಾನ್, 20 ಕಿ.ಮೀ, ಅರ್ಧ ಮ್ಯಾರಥಾನ್, 10 ಕಿ.ಮೀ ಮತ್ತು 5 ಕಿ.ಮೀ ಓಟಗಳಲ್ಲಿ ವಿವಿಧ ವಯೋಮಾನದ ಅಗ್ರಸ್ಥಾನಿಗಳಿಗೆ ಬಹುಮಾನಗಳನ್ನು ನೀಡಲಾಯಿತು.

ಫಲಿತಾಂಶ: ಪೂರ್ಣ ಮ್ಯಾರಥಾನ್ (ಮುಕ್ತ ವಿಭಾಗ)

ಪೂರ್ಣ ಮ್ಯಾರಥಾನ್ (ಮುಕ್ತ ವಿಭಾಗ)ನಲ್ಲಿ ಪುರುಷರ ವಿಭಾಗದಲ್ಲಿ ನಝೀಮ್ ( ಕೂನೂರು - 2:42:15) ಮತ್ತು ಮಹಿಳಾ ವಿಭಾಗದಲ್ಲಿ ಶ್ರೇಯಾ ಎಂ (ಸುಳ್ಯ-3:22:08) ಚಾಂಪಿಯನ್ ಆಗಿ ಹೊರಹೊಮ್ಮಿದರು.


‘‘ಈ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಶ್ರೇಯವು ಮಂಗಳೂರು ರನ್ನರ್ಸ್ ಕ್ಲಬ್ ತಂಡಕ್ಕೆ ಅವರ ದಣಿವರಿಯದ ಪ್ರಯತ್ನಗಳಿಗೆ ಸಲ್ಲುತ್ತದೆ. ಇದು ಮಂಗಳೂರಿನಲ್ಲಿ ನಡೆಯುವ ಅತಿದೊಡ್ಡ ಸಮುದಾಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ, ಎನ್‌ಟಿಟಿ ಡೇಟಾದಂತಹ ಪಾಲುದಾರರೊಂದಿಗೆ ಮುಂದಿನ ವರ್ಷಗಳಲ್ಲಿ ಇದನ್ನು ಇನ್ನಷ್ಟು ದೊಡ್ಡದಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.’’

-ಸುಯೋಗ್ ಶೆಟ್ಟಿ ,ಸಿಇಒ ನೀವಿಯಸ್ ಸೊಲ್ಯೂಷನ್ಸ್

‘‘ಪ್ರತಿ ವರ್ಷ ನೀವಿಯಸ್ ಮಂಗಳೂರು ಮ್ಯಾರಥಾನ್ ಗುಣಮಟ್ಟ ಮತ್ತು ಭಾಗವಹಿಸುವಿಕೆಯಲ್ಲಿ ಸುಧಾರಣೆ ಕಾಣುತ್ತಿದೆ. ಪ್ರತಿಯೊಬ್ಬ ಓಟಗಾರನಿಗೆ ಅಸಾಧಾರಣ ಅನುಭವವನ್ನು ನೀಡುತ್ತದೆ.

-ಮೆಹ್ವಿಶ್ ಹುಸೇನ್, ರೇಸ್ ನಿರ್ದೇಶಕರು

‘‘ಮಂಗಳೂರು ಜಗತ್ತಿನೊಂದಿಗೆ ವೇಗದಲ್ಲಿ ಸಾಗುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಈ ಮ್ಯಾರಥಾನ್ ನಗರದ ಸಾಮರ್ಥ್ಯವನ್ನು ಸಾಬೀತು ಮಾಡುವತ್ತ ಒಂದು ಹೆಜ್ಜೆಯಾಗಿದೆ.

-ಕ್ಯಾ. ಬ್ರಿಜೇಶ್ ಚೌಟ , ಸಂಸದರು ದ.ಕ.

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News