×
Ad

ನ.14ರಂದು ದ.ಕ.ದ 1,559 ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕ- ಶಿಕ್ಷಕ ಮಹಾಸಭೆ

Update: 2025-11-12 13:53 IST

ಮಂಗಳೂರು, ನ.12: ರಾಜ್ಯ ಸರಕಾರದ ಆದೇಶದಂತೆ ನ. 14ರಂದು ದ.ಕ. ಜಿಲ್ಲೆಯ 1,559 ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕ- ಶಿಕ್ಷಕ ಮಹಾಸಭೆ ನಡೆಯಲಿದೆ ಎಂದು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಕರ್ಬಾರಿ ತಿಳಿಸಿದ್ದಾರೆ.

ಜಿ.ಪಂ. ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ದ.ಕ. ಜಿಲ್ಲೆಯ 225 ಕಿ.ಪ್ರಾ. ಶಾಲೆಗಳು, 658 ಹಿ.ಪ್ರಾ. ಶಾಲೆಗಳು, 171 ಪ್ರೌಢಶಾಲೆಗಳು ಹಾಗೂ 55 ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಈ ಸಭೆ ನಡೆಯಲಿದೆ ಎಂದರು.

ವಿದ್ಯಾರ್ಥಿಗಳ ಪೋಷಕರನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವುದು, ಸರಕಾರಿ ಶಾಲೆ, ಕಾಲೇಜುಗಳ ಬಗ್ಗೆ ಪೋಷಕರಲ್ಲಿ ಭರವಸೆ ಹುಟ್ಟಿಸುವುದು, ಶಾಲೆ, ಮನೆ ಮತ್ತು ಸಮಾಜದ ನಡುವೆ ನಿರಂತರ ಸಂಪರ್ಕ ಕಲ್ಪಿಸುವುದು, ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರಕಾರದಿಂದ ಅನುಷ್ಟಾನ ಮಾಡಲಾದ ಕಾರ್ಯಕ್ರಗಳ ಮಾಹಿತಿಯನ್ನು ಸಭೆಯಲ್ಲಿ ಪೋಷಕರಿಗೆ ನೀಡಲಾಗುವುದು.

ಸಂವಿಧಾನದ ಪೀಠಿಕೆ ಓದುವ ಮೂಲಕ ಸಭೆ ಆರಂಭಗೊಳ್ಳಲಿದೆ. ಮಕ್ಕಳ ಪ್ರಗತಿ, ಹಾಜರಾತಿ ಮಾಹಿತಿ ಪೋಷಕರಿಗೆ ನೀಡುವ ಜತೆಗೆ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಸಿದ್ಧತೆ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಣೆ, ಏಕಾಗ್ರತೆ ಬಗೆ ತಜ್ಞರಿಂದ ಮಾಹಿತಿಯನ್ನು ಒದಗಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಕ್ಕಳ ಅಭಿನಂದನೆ ಜತೆಗೆ ವಿವಿಧ ಕಾಯ್ದೆಗಳ ಬಗ್ಗೆ ಅರಿವು ನೀಡುವ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಅವರು ವಿವರಿಸಿದರು.

ಗೋಷ್ಟಿಯಲ್ಲಿ ಹಿರಿಯ ಅಧಿಕಾರಿಗಳಾದ ಸದಾನಂದ ಪೂಂಜ, ರಾಜೇಶ್ವರಿ, ಶಶಿಧರ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News