×
Ad

ಆ. 30 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Update: 2024-08-28 23:20 IST

ಮಂಗಳೂರು: ನಾಗುರಿ 111ಕೆ.ವಿ (ಎಕ್ಕೂರು) ಫೀಡರ್ ಮತ್ತು 11ಕೆ.ವಿ ಪಂಪ್‌ವೆಲ್ ಫೀಡರ್ ವಿದ್ಯುತ್ ಮಾರ್ಗದಲ್ಲಿ ಆ.30 ರಂದು ವಿದ್ಯುತ್ ನಿಲುಗಡೆಯಾಗಲಿದೆ.

ಕುಲಶೇಖರ 110/33/11 ಕೆ.ವಿ ಉಪಕೇಂದ್ರದಿಂದ ಹೊರಡುವ 11ಕೆವಿ ನಾಗುರಿ(ಎಕ್ಕೂರು) ಫೀಡರ್ ಮತ್ತು 11ಕೆ.ವಿ ಪಂಪ್‌ವೆಲ್ ಫೀಡರ್‌ನಲ್ಲಿ ಆ. 30ರಂದು ಜಂಪರ್ ಬದಲಾವಣೆ ಹಾಗೂ ಜಿಒ ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮರೋಳಿ, ಪಡೀಲ್, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್‌ವೆಲ್, ಕಪಿತಾನಿಯೊ, ರೆಡ್‌ಬಿಲ್ಡಿಂಗ್, ರೈಲ್ವೇಸ್ಟೇಷನ್, ಕ್ವಾಡ್ ಸೆಂಟರ್, ಇಂಡಿಯಾನ ಹಾಸ್ಪಿಟಲ್, ನಿಟ್ಟೆ ಎಜುಕೇಷನ್ ಪಂಪ್‌ವೆಲ್, ಮಹಾವೀರ ಸರ್ಕಲ್ ಪಂಪ್‌ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News