×
Ad

ಮಂಗಳೂರಿನಲ್ಲಿ ಖಾಸಗಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ

Update: 2026-02-26 20:59 IST

ಮಂಗಳೂರು: ನಗರದಲ್ಲಿ ಖಾಸಗಿ ಬಸ್ ಮಾಲಕರ ಎಲೆಕ್ಟ್ರಿಕ್ ಬಸ್ ಸಂಚಾರವು ನಗರದ ಮೊರ್ಗನ್ ಗೇಟ್ ಪಾಲೆ ಮಾರ್ ಗಾರ್ಡನ್ ನಲ್ಲಿ ನಡೆದ ಸಮಾರಂಭದೊಂದಿಗೆ ಆರಂಭಗೊಂಡಿದೆ.

ನಗರದ ನಡುವೆ ಸಂಚಾರ ಮಾಡುವ ರೂಟ್ ನಂಬರ್ 27 ಬಸ್ ಗಳ ಪೈಕಿ ಇದೀಗ ಪ್ರಥಮ ಬಾರಿಗೆ ಒಂದು ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿದೆ. ಇದರೊಂದಿಗೆ ಮಂಗಳೂರಿನ ಖಾಸಗಿ ಬಸ್ ಸಂಚಾರ ದಲ್ಲಿ ಹೊಸ ಅಧ್ಯಾಯ ಆರಂಭಗೊಂಡಂತಾಗಿದೆ.

ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಬಸ್ ಗೆ ಚಾಲನೆ ನೀಡಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ , ಬಸ್ ಮಾಲಕ ದಿಲ್ ರಾಜ್, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News