ಬೆಳ್ತಂಗಡಿ: ಸಮಸ್ತದ ನೂರನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಆದರ್ಶ ಪ್ರಚಾರ ಸಮ್ಮೇಳನ
ಬೆಳ್ತಂಗಡಿ: ಕಾಸರಗೋಡಿನ ಕುಣಿಯಾದಲ್ಲಿ ನಡೆಯುವ ಸಮಸ್ತದ ನೂರನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಬೆಳ್ತಂಗಡಿ ತಾಲೂಕು ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕ ಬಂಡಿಮಠ ಮೈದಾನ ತೊಟ್ಟಿ ಉಸ್ತಾದ್ ವೇದಿಕೆಯಲ್ಲಿ ಡಿ. 21 ರಂದು ಆದರ್ಶ ಪ್ರಚಾರ ಸಮ್ಮೇಳನ ನಡೆಯಿತು.
ಮಧ್ಯಾಹ್ನ ಸೈಯದ್ ತ್ವಾಹ ತಂಙಳ್ ನೇತೃತ್ವದಲ್ಲಿ ಪಣಕಜೆ ಮಖಾಂ ಝಿಯಾರತಿನೊಂದಿಗೆ ಆರಂಭಗೊಂಡು ಮಸೀದಿ ಅಧ್ಯಕ್ಷರಾದ ನಿಯಾಝ್ ಪಣಕಜೆ ಧ್ವಜ ಹಸ್ತಾಂತರ ಮುಖಾಂತರ ಪ್ರಾರಂಭವಾಯಿತು. ನಂತರ ಬೆಳ್ತಂಗಡಿ ರೇಂಜ್ ಮಟ್ಟದ ಮದರಸ ವಿದ್ಯಾರ್ಥಿಗಳ ತಹ್ದೀಸ್ ಸಮಾವೇಶ ಹಾಗೂ ವಲಯ ವಿಖಾಯ ಸಂಗಮ ನಡೆಯಿತು.
ಮಜೀದ್ ದಾರಿಮಿ, ಇಲ್ಯಾಸ್ ಅಝ್ಹರೀ ತರಗತಿ ನಡೆಸಿದರು. ಖಾದರ್ ಬಂಗೇರುಕಟ್ಟೆ ವೀಕ್ಷಕರಾಗಿದ್ದರು. ನಂತರ ಸಂಜೆ ಕಿನ್ನಿಗೋಳಿಯಿಂದ ಉಲಮಾಗಳು ,ಉಮರಾಗಳು,ವಿದ್ಯಾರ್ಥಿಗಳು,ಸೇರಿದಂತೆ ವಿವಿದ ಮದರಸಗಳ ಎಸ್ ಕೆ ಎಸ್ ಬಿ ವಿ ತಂಡಗಳ ಧಫ್ ,ಸ್ಕೌಟ್ ಮತ್ತು ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡಗಳು,ದಾರುಸ್ಸಲಾಂ ವಿಧ್ಯಾರ್ಥಿಗಳು, ಕಕ್ಕಿಂಜೆ ಜಲಾಲಿಯ ಧರ್ಸ್ ವಿದ್ಯಾರ್ಥಿಗಳ ಆಕರ್ಷಕ ಪ್ರಚಾರ ಜಾಥ ಮುಂಡೂರು ತಂಙಳ್ ದುವಾದೊಂದಿಗೆ ಜುನೈದ್ ಜಿಫ್ರಿ ತಂಙಳ್ ಆತೂರು ಉದ್ಘಾಟಿಸಿದರು.
ಸದಖತುಲ್ಲಾ ದಾರಿಮಿ, ಶಂಸುದ್ದೀನ್ ದಾರಿಮಿ, ನೌಶಾದ್ ಅಝ್ಹರಿ, ಅಝೀಝ್ ಅಶ್ಶಾಫಿ, ಬಶೀರ್ ದಾರಿಮಿ, ಝುಬೈರ್ ಕಕ್ಕಿಂಜೆ , ಇಲ್ಯಾಸ್ ಚಿಲಿಂಬಿ, ನೌಶಾದ್ ಮದ್ದಡ್ಕ ರ‍್ಯಾಲಿಯನ್ನು ನಿಯಂತ್ರಿಸಿದರು.
ಎಸ್ ಕೆ ಎಸ್ ಎಸ್ ಎಫ್ ಸ್ವಯಂ ಸೇವಕ ವಿಖಾಯ ತಂಡ ಹೆದ್ದಾರಿ ಸುವ್ಯವವಸ್ಥೆಯನ್ನು ನಿರ್ವಹಿಸಿತು. ಕಕ್ಕಿಂಜೆಯಿಂದ ಸಾಗಿ ಬಂದ ರಿಕ್ಷಾ ಜಾಥಾವೂ ಆಕರ್ಷಣಿಯವಾಗಿತ್ತು. ಮಗ್ರಿಬ್ ನಮಾಜಿನ ನಂತರ ಸಭಾ ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ ಅಧ್ಯಕ್ಷರಾದ ಅಬ್ದುರ್ರಝಾಕ್ ಕನ್ನಡಿಕಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.
ಆದಂ ದಾರಿಮಿ ದುಆ ನೆರವೇರಿಸಿದ ಕಾರ್ಯಕ್ರಮದಲ್ಲಿ ಮದ್ದಡ್ಕ ಸ್ವಾಗತ ಸಮಿತಿ ಅಧ್ಯಕ್ಷರಾದ ಸಿರಾಜ್ ಚಿಲಿಂಬಿ ಸ್ವಾಗತಿಸಿದರು. ಸಮಸ್ತ ಕರ್ನಾಟಕ ಕೋಶಾಧಿಕಾರಿಯಾದ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೋಡಾರ್ ಉಸ್ತಾದ್ ಅನುಗ್ರಹ ಭಾಷಣವನ್ನು ನಡೆಸಿ ಕಾಸರಗೋಡ್ ಕುಣಿಯಾದ ಸಮಸ್ತ ಸಮ್ಮೇಳನ ಯಶಸ್ವಿಗೆ ಕರೆ ನೀಡಿದರು.
ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮುಖ್ಯಪ್ರಭಾಷಣ ಮಾಡಿದರು.ಮದ್ದಡ್ಕ ಮದರಸ ವಿಧ್ಯಾರ್ಥಿ ರುಹೈಲ್ ಖಿರಾಅತ್ ಪಠಿಸಿದರು.ಮದ್ದಡ್ಕ ಶಾಖೆಯ ವತಿಯಿಂದ ಚಹಾ ತಿಂಡಿ ವಿತರಣೆ ನಡೆಯಿತು.
ಮಗ್ರಿಬ್ ನಮಾಝಿನ ಬಳಿಕ ನಡೆದ ಕಾರ್ಯಕ್ರಮದಲ್ಲಿ ಚೆಯರ್ಮಾನ್ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ ಅಧ್ಯಕ್ಷತೆ ವಹಿಸಿದರು. ಕಕ್ಕಿಂಜೆ ಮುದರ್ರಿಸ್ ಸಿಧ್ಧೀಖ್ ಜಲಾಲಿ ಉಸ್ತಾದ್ ದಿಕ್ಸೂಚಿ ಭಾಷಣ ಮಾಡಿದರು. ಪ್ರಮುಖ ವಾಗ್ಮಿ ಅಶ್ಫಾಕ್ ಫೈಝಿ ಬ್ಯಾರಿ ಭಾಷಣ ಮಾಡಿದರು. ಖ್ಯಾತ ವಾಗ್ಮಿ ಅಝೀಝ್ ದಾರಿಮಿ ಚೊಕ್ಕಬೆಟ್ಟು ಶುಭಾಶಯ ಭಾಷಣ ಮಾಡಿದರು. ಪ್ರಖ್ಯಾತ ಸುನ್ನತ್ ಜಮಾಅತಿನ ವಾಗ್ಮಿ ಕೇರಳದ ಜಝೀಲ್ ಕಮಾಲಿ ಫೈಝಿ ಉಸ್ತಾದ್ ಮುಖ್ಯ ಪ್ರಭಾಷಣಗೈಯುತ್ತಾ ಪರಲೋಕ ಜೀವನದ ವಿಜಯವೂ ಮುಸ್ಲಿಮರ ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ಸಮಸ್ತದ ಸುಂದರ ಹಾದಿಯಲ್ಲಿ ಸಾಗಿದರೆ ಮಾತ್ರ ಇದನ್ನು ಗಳಿಸಬಹುದು. ಸಮಸ್ತದ ಸಮ್ಮೇಳನ ಮತ್ತು ಸಯ್ಯಿದುಲ್ ಉಲಮಾರ ಶತಾಬ್ದಿ ಯಾತ್ರೆ ವಿಜಯಗೊಳಿಸಲು ಕರೆ ನೀಡಿದರು.
ರೇಜ್ ಅಧ್ಯಕ್ಷರಾದ ಅಶ್ರಫ್ ಫೈಝಿ ಮತ್ತು ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ನಝೀರ್ ಅಝ್ಹರಿಯವರು ಶುಭ ಹಾರೈಸಿದರು. ಶಂಸುದ್ದೀನ್ ಅಶ್ರಫಿ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇಸ್ಮಾಯಿಲ್ ಫೈಝಿ,ದ ಕ ಖಾಝಿ ಸುಪುತ್ರ ಹುಸೈನ್ ರಹ್ಮಾನಿ , ಶಾಫಿ ಫೈಝಿ, ಇಸ್ಮಾಯಿಲ್ ಯಮಾನಿ, ಲತೀಫ್ ಗುರುಪುರ, ಯಾಕುಬ್ ವೈ ಕೆ ಕನ್ನಡಿಕಟ್ಟೆ , ಉಸ್ಮಾನ್ ಹಾಜಿ ಏರ್ ಇಂಡಿಯಾ, ಶಮೀಂ ವಕೀಲರು, ನವಾಝ್ ವಕೀಲರು, ಉಮರ್ ಹಾಜಿ ಉಪ್ಪಿನಂಗಡಿ, ಅಝೀಝ್ ಮಾಲಿಕ್, ಅಹ್ಮದ್ ಹುಸೇನ್, ಇಸ್ಮಾಯಿಲ್ ಬಂಗೇರುಕಟ್ಟೇ, ಸಲಾಂ ಬೂಟ್ ಬಝಾರ್, ಹಾಶಿಂ ಫೈಝಿ ಉಪಸ್ಥಿತರಿದ್ದರು.
ನಿಝಾಮುದ್ದೀನ್ ಅನ್ಸಾರಿ ನಿರೂಪಿಸಿದರು. ಅಲ್ ಕೌಸರ್ ಮೀಡಿಯಾ ಕಾರ್ಯಕ್ರಮದ ಪ್ರಸಾರವನ್ನು ಮಾಡಿತ್ತು. ಪ್ರಧಾನ ಸಂಚಾಲಕರಾದ ಇಸ್ಮಾಯಿಲ್ ದಾರಿಮಿ ಸ್ವಾಗತಿಸಿ ಸಂಚಾಲಕರಾದ ರಿಯಾಝ್ ಫೈಝಿ ಕಕ್ಕಿಂಜೆ ಧನ್ಯವಾದ ನಡೆಸಿದರು.