×
Ad

ಉಪ್ಪಿನಂಗಡಿ | ʼಮುಅಲ್ಲಿಂ ಮಂಝಿಲ್ʼ ಮನೆ ಹಸ್ತಾಂತರಿಸಿದ ಸಯ್ಯಿದುಲ್ ಉಲಮಾ

Update: 2024-09-25 23:01 IST

ಉಪ್ಪಿನಂಗಡಿ :  ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಬುಧವಾರ ಜೋಗಿಬೆಟ್ಟುವಿನಲ್ಲಿ ಆಯೋಜಿಸಿದ್ದ SKJMCC ವತಿಯಿಂದ ಬಡ ಮದ್ರಸ ಅಧ್ಯಾಪಕರಿಗೆ ನೀಡಲ್ಪಡುವ ʼಮುಅಲ್ಲಿಂ ಮಂಝಿಲ್ʼ ಉದ್ಘಾಟನೆಯನ್ನು ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್‌ ನೆರವೇರಿಸಿದರು.

ಯೋಜನೆಯ ಫಲಾನುಭವಿ ಅಬೂಬಕ್ಕರ್ ಸಿದ್ದೀಕ್ ದಾರಿಮಿಯವರಿಗೆ ʼಮುಅಲ್ಲಿಂ ಮಂಝಿಲ್ʼ ಮನೆಯ ಕೀ ಹಸ್ತಾಂತರಿಸಲಾಯಿತು.

 

ಕಾರ್ಯಕ್ರಮದಲ್ಲಿ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಪಮ್ಮಲೆ, ಕಾರ್ಯದರ್ಶಿ ಮುಹಮ್ಮದ್ ನವವಿ ಬೆಳ್ಳಾರೆ, ಕೋಶಾಧಿಕಾರಿ ಇಬ್ರಾಹಿಂ ದಾರಿಮಿ ಕಡಬ, ಹಾಗೂ ಜಿಲ್ಲಾ ಪ್ರತಿನಿಧಿಗಳು, ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಎಚ್ ಅಶ್ರಫ್ ಹನೀಫಿ , ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ , ಕೋಶಾಧಿಕಾರಿ ಅಬ್ದುರಹ್ಮಾನ್ ಹಾಜಿ ಕೊಳ್ಳೆಜಾಲ್, ಚೇರ್ಮನ್ ಝಕರಿಯ ಮುಸ್ಲಿಯಾರ್ ಐ.ಟಿ ಕೋಡಿನೇಟರ್ ಅಬ್ದುರಝಾಕ್ ದಾರಿಮಿ, ರೇಂಜ್ ಪ್ರತಿನಿಧಿಗಳು, ವಿಖಾಯ ಚೇರ್ಮೆನ್‌ ಇಸ್ಮಾಯಿಲ್ ತಂಙಳ್‌ ಉಪ್ಪಿನಂಗಡಿ, ಉಪ್ಪಿನಂಗಡಿ ವಲಯ SKSSF ಪ್ರತಿನಿಧಿಗಳು, ಸೇರಿದಂತೆ ಉಲಮಾ ಉಮರಾಗಳು ಭಾಗವಹಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News