×
Ad

ಧರ್ಮಸ್ಥಳ ದೂರು | ಸತ್ಯಕ್ಕೇ ಜಯ ಎಂದ ಸುಜಾತ ಭಟ್ ಪರ ವಕೀಲರು

Update: 2025-07-31 13:07 IST

ಮಂಗಳೂರು: ಧರ್ಮಸ್ಥಳ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನೊಂದಿಗೆ ಎಸ್ಐಟಿಯ ಕಾರ್ಯಾಚರಣೆ ನಾಲ್ಕನೇ ದಿನ ತಲುಪಿದೆ. ಸಾಕ್ಷಿಯು ಗುರುತುಪಡಿಸಿರುವ 13 ಸ್ಥಳಗಳಲ್ಲಿ ಉತ್ಖನನ ಕಾರ್ಯವು ನಡೆಯುತ್ತಿದೆ.

ಉತ್ಖನ ಕಾರ್ಯದ 3ನೇ ದಿನವಾದ ಗುರುವಾರ, ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರ ವಕೀಲರಾದ ಮಂಜುನಾಥ್ ಎನ್ ಅವರು "ಸತ್ಯಕ್ಕೇ ಜಯ ಸತ್ಯಮೇವ ಜಯತೆ, ಗಾಡ್ ಇಸ್ ಗ್ರೇಟ್" ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ.

ವಕೀಲ ಮಂಜುನಾಥ್ ಅವರು ಬಿಡುಗಡೆ ಮಾಡಿರುವ ಪರೋಕ್ಷ ಸಂಕೇತಗಳಂತೆ ಇರುವ ಪತ್ರಿಕಾ ಹೇಳಿಕೆಯು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News