×
Ad

ಬಂಟ್ವಾಳ: 'ಮುಈನುಸ್ಸುನ್ನ ನೀಡುವ 2ನೇ 'ಫಿದಾಕ್ ಅವಾರ್ಡ್'ಗೆ ತೋಕೆ ಕಾಮಿಲ್ ಸಖಾಫಿ ಆಯ್ಕೆ

Update: 2026-01-07 10:15 IST

ಬಂಟ್ವಾಳ: ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅವಾ ಕಾಲೇಜಿನ ವಿದ್ಯಾರ್ಥಿ ಸಂಘಟನೆ 'ಮುಈನುಸ್ಸುನ್ನ' ವತಿಯಿಂದ ನೀಡುವ 2ನೇ ವರ್ಷದ 'ಫಿದಾಕ್ ಅವಾರ್ಡ್- 2025-26'ಗೆ ಸುನ್ನಿ ವಿದ್ವಾಂಸ ಟಿ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು 25,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸುನ್ನಿ ಆಶಯ, ಆದರ್ಶಗಳ ಪ್ರಸರಣಕ್ಕಾಗಿ ಬೋಧನೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೆಜಿಎನ್ ದಅವಾ ಕಾಲೇಜಿನ 'ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಬರಹಗಾರ ಎಸ್.ಪಿ.ಹಂಝ ಸಖಾಫಿ ಹಾಗೂ ಎ.ಕೆ.ನಂದಾವರ ಅವರನ್ನೊಳಗೊಂಡ ಸಮಿತಿಯು ಅವರನ್ನು ಆಯ್ಕೆ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.

ಜ.12ರಂದು ನಡೆಯುವ ಕೆಜಿಎನ್ ದಅ್ ವಾ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕೋತ್ಸವ 'ಫಿದಾಕ್ ' ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಟಿ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿಯವರು ಮರ್ಹೂಂ ಎನ್.ಎಂ.ಉಸ್ತಾದರ ದರ್ಸ್ ಶಿಷ್ಯ. ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಯಲ್ಲಿ ಕಾಮಿಲ್ ಸಖಾಫಿ ಪದವಿ ಪಡೆದು ವಿವಿಧ ಮೊಹಲ್ಲಾಗಳಲ್ಲಿ ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ಪ್ರಸಕ್ತ ನಚ್ಚಬೆಟ್ಟು ದಾರುಲ್ ಮುಸ್ತಫಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಅತ್ತಫ್ಹೀಮ್ ಫೀ ಮಸಾಇಲಿತ್ತಹ್ ಕೀಮ್, ನಸ್ಖುಲ್ ವಿಜಾಹ್ ಫೀ ಫಸ್ಖಿನ್ನಿಕಾಹ್, ತಫ್ರೀಹುಲ್ ಫುವಾದ್ ಬಿ ಅದಿಲ್ಲತಿಲ್ ಇಹ್ತಿಫಾಲಿ ಬಿಲ್ ಮೀಲಾದ್, ಅಲ್ ಕೌಲುಸ್ಸಯ್ಯಿತ್ ಫೀ ಸ್ವಲಾತಿನ್ನಿಸಾಇ ಅಲಲ್ ಮಯ್ಯಿತ್, ಅಲ್ ಬುರ್ಹಾನುಲ್ ಅಖ್ ವಮ್ ಫೀ ಅದಿಲ್ಲತಿ ಸ್ಸವಾದಿಲ್ ಅಅ್ಲಮ್ (ನಾಲ್ಕು ಭಾಗಗಳು), ಕಷ್ಫುಶ್ಶುಬ್ ಹಾತ್ ಅಮ್ಮಾ ಯತ ಅಲ್ಲಖು ಬಿಲ್ ಅಮ್ ವಾತ್, ತಹ್ವೀಲುಲ್ ಇನ್ಸ್ ಅನ್ ತಹ್ವೀಲಿಲ್ ಜಿನ್ನ್ ಮುಂತಾದ ಏಳು ಅರಬಿ ಗ್ರಂಥಗಳನ್ನು ರಚಿಸಿರುವ ಅವರು, ರಸ್ಮುಲ್ ಉಸ್ಮಾನಿ: ಸಂಶಯಗಳಿಗೆ ಉತ್ತರ, ರಸ್ಮುಲ್ ಉಸ್ಮಾನಿ: ಶಿಥಿಲ ತಂತ್ರಗಳಿಗೆ ಸಬಲ ಮಂತ್ರಗಳು, ತರಾವೀಹ್: ಒಂದು ಸಮಗ್ರ ಅಧ್ಯಯನ, ಮದ್ಸ್ ಹಬ್ ಮತ್ತು ತಖ್ಲೀದ್, ನಮಾಝ್ ಬಳಿಕ ಸಾಮೂಹಿಕ ಪ್ರಾರ್ಥನೆ, ತರೀಖತ್: ಸತ್ಯಾನ್ವೇಷಿಗಳಿಗೊಂದು ಕೈಪಿಡಿ, ಶೈಖ್ ಜೀಲಾನಿ ಮತ್ತು ರಾತೀಬ್, ಗೋರಿಗಳ ಸುತ್ತಮುತ್ತ, ಉರೂಸ್ ಆಚರಣೆ ಇಸ್ಲಾಮಿನಲ್ಲಿ, ಪವಿತ್ರ ಕುರ್ ಆನಿನ ಕೊನೆಯ ಅಮ್ಮ ಕಾಂಡದ ವ್ಯಾಖ್ಯಾನ ಹಾಗೂ ಎ.ಪಿ.ಉಸ್ತಾದರ ಹಜ್ ಕೃತಿಯ ಕನ್ನಡಾನುವಾದ ಮುಂತಾದ 11 ಕನ್ನಡ ಕೃತಿಗಳು, ರಸ್ಮುಲ್ ಉಸ್ಮಾನಿ ಸತ್ಯವುಂ ಮಿಥ್ಯವುಂ ಎಂಬ ಮಲಯಾಳಂ ಕೃತಿಯನ್ನೂ ರಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News