DERALAKATTE | ಅಪಘಾತದಲ್ಲಿ ಗಾಯಗೊಂಡಿದ್ದ ಜಲಾಲುದ್ದೀನ್ ಹುಮೈದಿ ನಿಧನ
ಉಳ್ಳಾಲ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿನ್ಯದ ಮೀಂಪ್ರಿ ಎಂಬಲ್ಲಿನ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮಂಜನಾಡಿ ಇಬ್ರಾಹೀಂ ಮದನಿ ಕಾಮಿಲ್ ಸಖಾಫಿ ಎಂಬವರ ಪುತ್ರ ಜಲಾಲುದ್ದೀನ್ ಹುಮೈದಿ(28) ಮೃತಪಟ್ಟವರು. ಉಡುಪಿ ಖಾಝಿ ಶೈಖುನಾ ಮಾಣಿ ಉಸ್ತಾದ್ ರ ಮೊಮ್ಮಗರಾಗಿರುವ ಜಲಾಲುದ್ದೀನ್ ಹುಮೈದಿ ಇತ್ತೀಚೆಗೆ ಚಿಕ್ಕಮಗಳೂರಿನ ಎನ್.ಆರ್. ಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರಳೆದಿದ್ದಾರೆ.
ಪ್ರತಿಭಾನ್ವಿತ ಯುವ ವಿದ್ವಾಂಸರಾಗಿದ್ದ ಜಲಾಲುದ್ದೀನ್ ಹುಮೈದಿಯವರು ಉಪ್ಪಳ್ಳಿ ಶಾದುಲಿ ಜುಮಾ ಮಸೀದಿಯಲ್ಲಿ ಸೇವಾ ನಿರತರಾಗಿದ್ದರು.
ಮೃತರು ತಂದೆ ತಾಯಿ, ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಇಂದು(ನ.26) ಅಸರ್ ನಮಾಝ್ ಬಳಿಕ ಕಿನ್ಯ ಬುಖಾರಿ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.