×
Ad

ಮಂಗಳೂರಿನಲ್ಲಿ ಜಲಯೋಗ; ಈಜುತ್ತಲೇ ಪ್ರಧಾನಿಗೆ ಪತ್ರ ಬರೆದ ಈಜುಗಾರ

Update: 2025-06-21 14:28 IST

ಮಂಗಳೂರು, ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಂಗಳೂರಿನ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ನಡೆದ ಜಲಯೋಗ ವಿಶೇಷ ಗಮನ ಸೆಳೆದಿದೆ. ಸುಮಾರು 40 ಮಂದಿ ಹವ್ಯಾಸಿ ಈಜುಗಾರರ ಬಳಗದ ಸದಸ್ಯರು ಭಾಗವಹಿಸಿ, ನೀರಿನಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದರು. ಈ ಸಂದರ್ಭ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದು ಗಮನ ಸೆಳೆದರು.

ಈಜುಕೊಳದ 16 ಅಡಿ ಆಳದ ನೀರಿನಲ್ಲಿ ಈಜುಗಾರರು ಪದ್ಮಾಸನ, ಶವಾಸನ ಮುಂತಾದ ಯೋಗಾಸನಗಳ ಕಸರತ್ತು ಪ್ರದರ್ಶಿಸಿದರು. ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ಈ ವರ್ಷದ ಯೋಗ ದಿನಾಚರಣೆಯ ಧ್ಯೇಯ ವಾಕ್ಯದಡಿ ಈ ಕಾರ್ಯಕ್ರಮ ನಡೆಯಿತು. ಮಂಗಳೂರು ಮಹಾನಗರ ಈಜುಕೊಳದ ಸಹಯೋಗದೊಂದಿಗೆ ಹವ್ಯಾಸಿ ಈಜುಗಾರರ ಬಳಗ ಜಲಯೋಗ ಆಯೋಜಿಸಿತ್ತು.

ಪೋಸ್ಟ್ ಕಾರ್ಡ್ ಮೂಲಕ ಶಿವಪ್ರಕಾಶ್‌ರವರು ‘ಡಿಯರ್ ಮೋದಿಜಿ, ಹ್ಯಾಪಿ ಇಂಟರ್ನ್ಯಾಷನಲ್ ಯೋಗ ಡೇ. ಐ ಯಾಮ್ ರೈಟಿಂಗ್ ದಿಸ್ ಪೋಸಟ್ ಕಾರ್ಡ್ ವೈಲ್ ಸ್ವಿಮ್ಮಿಂಗ್ ಇನ್‌ದ ಪೂಲ್. ಫಿಟ್ ಇಂಡಿಯಾ - ಶಿವಪ್ರಕಾಶ್, ಮಂಗಳೂರು’ ಬರೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News