×
Ad

ದಾವಣಗೆರೆ: ಅತ್ತೆ-ಮಾವನ ಮೇಲಿನ ಸಿಟ್ಟಿನಿಂದ 40 ಕ್ಕೂ ಮಿಕ್ಕ ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ; ಪ್ರಕರಣ ದಾಖಲು

Update: 2024-04-09 12:44 IST

ದಾವಣಗೆರೆ : ಅತ್ತೆ -ಮಾವನ ಮೇಲಿನ ಸಿಟ್ಟಿನಿಂದ ಸೊಸೆಯಾದವಳು 40 ಕ್ಕೂ ಹೆಚ್ಚು ಮೂರು ವರ್ಷದ ಅಡಿಕೆ ಮರ ಕಡಿದು ಹಾಕಿದ ಘಟನೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. 

ಅಡಿಕೆ ಮರ ಕಡಿದ ಮಹಿಳೆಯನ್ನು ರೂಪಾ ಕುಮಾರಸ್ವಾಮಿ ಎಂದು ಗುರುತಿಸಲಾಗಿದೆ. ಚಿದಾನಂದ ಸ್ವಾಮಿ ಎಂಬವರ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಕುಮಾರಸ್ವಾಮಿಯ ಪತ್ನಿಯಾಗಿದ್ದಾರೆ ರೂಪಾ.

ಈಕೆ ಹಲವಾರು ವರ್ಷಗಳಿಂದ ಆಸ್ತಿ ವಿಚಾರವಾಗಿ ವಾಗ್ವಾದ ನಡೆಸುತ್ತಿದ್ದಾಳೆ. ಅಲ್ಲದೇ ಮನೆ ಕಟ್ಟಿಸಲು 8 ಲಕ್ಷ ರೂ ಹಣವನ್ನೂ ಪಡೆದಿದ್ದಾಳೆ. ಈಗ 40 ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ್ದಾಳೆ.  ನಮಗೆ ವಯಸ್ಸಾಗಿದೆ. ನಮ್ಮನ್ನು ಸರಿಯಾಗಿ ನೋಡಿಕೊಳ್ಳದೆ ಹಲ್ಲೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮಾವ ಚಿದಾನಂದ ಸ್ವಾಮಿ  ಪೊಲೀಸರಿಗೆ ದೂರು ನೀಡಿದ್ದಾರೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News