×
Ad

ದಾವಣಗೆರೆ | ಲಂಚ ಪಡೆಯುತ್ತಿದ್ದ ಆರೋಪ: ಹೆಡ್ ಕಾನ್‍ಸ್ಟೇಬಲ್ ಲೋಕಾಯುಕ್ತ ಬಲೆಗೆ

Update: 2024-02-04 18:57 IST

ದಾವಣಗೆರೆ: ಪೊಲೀಸರ ವಶದಲ್ಲಿದ್ದ ಬೈಕ್ ಅನ್ನು ವಾಪಸ್ಸು ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಹೊನ್ನೂರಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಜ.31ರಂದು ಅಪಘಾತವಾಗಿದ್ದ ದ್ವಿಚಕ್ರ ವಾಹನವನ್ನು ಹೊನ್ನೂರಸ್ವಾಮಿ ಮಾಯಕೊಂಡ ಠಾಣೆಗೆ ತಂದಿದ್ದರು. ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎನ್ನುವರಿಗೆ ಸೇರಿದ ಈ ಬೈಕ್ ಅನ್ನು ವಿಚಾರಣೆ ನಂತರ ವಾಪಸ್ ನೀಡಲು 6 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.‌ ಮುಂಗಡವಾಗಿ 1 ಸಾವಿರ ಪಡೆದಿದ್ದ ಹೊನ್ನೂರುಸ್ವಾಮಿ ಉಳಿದ 5 ಸಾವಿರ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News