×
Ad

ದಾವಣಗೆರೆ | ಜಗಳೂರಿನ ಹಲವು ಗ್ರಾಮಗಳಲ್ಲಿ ಲಘು ಭೂಕಂಪನ

Update: 2025-12-13 22:34 IST

ದಾವಣಗೆರೆ, ಡಿ.13: ಜಗಳೂರು ತಾಲೂಕಿನ ಚಿಕ್ಕ ಮಲ್ಲನಹೊಳೆ, ದಿಬ್ಬದ ಹಳ್ಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಘಟನೆ ಶನಿವಾರ ರಾತ್ರಿ 8ರ ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ.

ಭಾರೀ ಶಬ್ದವಾದ ತಕ್ಷಣ ಭೂಮಿಯು ಕಂಪನವಾಗಿದ್ದು, ಮನೆಯಲ್ಲಿರುವ ಪಾತ್ರೆ, ಸಾಮಗ್ರಿಗಳು ಇದ್ದಕ್ಕಿದ್ದಂತೆ ಬಿದ್ದಿವೆ. ಅಲ್ಲದೆ, ಮನೆಯಲ್ಲಿದ್ದ ಪೀಠೋಪಕರಣಗಳು ಅಲುಗಾಡಿದೆ. ದೊರೆ ಸಾಲು ಭಾಗದ ಗ್ರಾಮಗಳಲ್ಲಿ ಮಾಳಿಗೆ ಮನೆಯ ಮೇಲ್ಚಾವಣಿಯ ಮಣ್ಣು ಕುಸಿದು ಬಿದ್ದಿವೆ. ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದು, ಮನೆಗಳಿಂದ ಹೊರಗೆ ಬಂದು ನಿಂತಿದ್ದಾರೆ.

ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸು ಅಲುಗಾಡಿದ್ದು, ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.

ಮೂರು ತಾಲೂಕುಗಳಲ್ಲಿ ಲಘು ಭೂಕಂಪನ :

ಚಳ್ಳಕೆರೆ ತಾಲೂಕಿನ ಕೊಲಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಹಾಗೂ ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ, ದಿಬ್ಬಜಹಟ್ಟಿ ಸೇರಿದಂತೆ ದೊರೆ ಸಾಲು ಭಾಗದ ಇತರ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಸಿಪಿಐ ಸಿದ್ರಾಮಯ್ಯ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News