×
Ad

ಧರ್ಮಸ್ಥಳ ದೂರು | ಎಸ್ಐಟಿ ತನಿಖೆ ಆರಂಭವಾಗಿದೆ, ವರದಿ ಬರುವವರೆಗೆ ನಾವು ಏನೂ ಮಾಹಿತಿ ನೀಡುವಂತಿಲ್ಲ : ಜಿ.ಪರಮೇಶ್ವರ್

Update: 2025-07-27 19:04 IST

ದಾವಣಗೆರೆ : ಧರ್ಮಸ್ಥಳ ಪ್ರಕರಣವನ್ನು ಸರಕಾರ ಜನರ ಅಪೇಕ್ಷೆಯಂತೆ ಎಸ್ಐಟಿ ತನಿಖೆಗೆ ಆದೇಶಿಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ತನಿಖೆ ಆರಂಭವಾಗಿದೆ. ತನಿಖಾ ವರದಿ ಬರುವವರಿಗೆ ನಾವು ಏನು ಮಾಹಿತಿ ನೀಡುವಂತಿಲ್ಲ ಎಂದರು.

ಬಿಕ್ಲು ಶಿವು ಕೊಲೆ ಪ್ರಕರಣವನ್ನೂ ಸಿಐಡಿಗೆ ನೀಡಲಾಗಿದ್ದು, ಈ ಕುರಿತು ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಭೈರತಿ ಬಸವರಾಜ್ ಸೇರಿದಂತೆ ಯಾರೇ ಇದ್ದರೂ ಅದು ತನಿಖೆ ನಂತರ ಗೊತ್ತಾಗಲಿದೆ. ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು

ಸುರ್ಜೇವಾಲ ಸೂಪರ್ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಶಾಸಕರ ಜೊತೆಗೆ ಒನ್ ಟು ಒನ್ ವಿಚಾರ ಇದು, ನಮ್ಮ ಆಂತರಿಕ ವಿಚಾರ. ಇದಕ್ಕೂ ಮತ್ತು ಭಾರತೀಯ ಜನತಾ ಪಾರ್ಟಿಗೆ ಯಾವುದೇ ರೀತಿಯಾದ ಸಂಬಂಧವಿಲ್ಲ. ಅವರ ಉಸ್ತುವಾರಿ ಬಂದಾಗಲು ಅವರು ಹಾಗೇ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ರಸಗೊಬ್ಬರ ಅಭಾವ ವಿಚಾರವಾಗಿ ಕೇಂದ್ರ ಸರಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದೆವು. ಆದರೆ, ಕೇಂದ್ರ ಗೊಬ್ಬರ ವಿತರಣೆಯಲ್ಲಿ ತಾರತಮ್ಯ ಮಾಡಿದೆ. ನಮ್ಮ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರವನ್ನು ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News